Advertisement

ಹೆಗ್ಗಡೆ ಜೀವನವೇ ಧರ್ಮದ ವ್ಯಾಖ್ಯಾನ: ಕೇಂದ್ರ ಸಚಿವೆ ಸ್ಮತಿ ಇರಾನಿ

09:55 AM Nov 23, 2022 | Team Udayavani |

ಬೆಳ್ತಂಗಡಿ : ಸರ್ವಧರ್ಮದಲ್ಲಿ ನಿಷ್ಠೆ, ಧರ್ಮದ ರೂಪವೇನೆಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಜೀವನವೇ ವ್ಯಾಖ್ಯಾನವಾಗಿದೆ. ಅವರಿಬ್ಬರು ಕಾಂಚಾಣದಾಚೆಗಿನ ಸಾತ್ವಿಕ ಜೀವನದಿಂದ ಜನಹಿತ, ರಾಷ್ಟ್ರಹಿತವಾದ ಉತ್ಕೃಷ್ಟ ಸಮಾಜವನ್ನು ಕಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಮಂಗಳವಾರ ನಡೆದ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಧರ್ಮಗಳ ಸಾರವೂ ಒಂದೇ ಆಗಿದ್ದು ನಾವು ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸ ಬೇಕು, ಪ್ರೀತಿಸಬೇಕು. ಇನ್ನೊಬ್ಬರ ದುಃಖವನ್ನು ಹೋಗಲಾಡಿಸುವುದು ಕರ್ತವ್ಯ ಎಂದರು.

50 ಲಕ್ಷ ಮಾತೆಯರ ಆಶೀರ್ವಾದ
ಡಾ| ಹೆಗ್ಗಡೆ ಅವರು 50 ಲಕ್ಷ ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿದ್ದಾರೆ. ಹಾಗಾಗಿ ಅವರಿಗೆ ಅಷ್ಟೂ ಮಾತೆಯರ ಆಶೀರ್ವಾದ ಇದೆ ಎಂದ ಸ್ಮತಿ, ಮಹಿಳಾ ಸಶಕ್ತೀ ಕರಣಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ನೀಡಿದ ಕೊಡುಗೆಯನ್ನು ಶ್ಲಾ ಸಿದರು.

ಸಮದೃಷ್ಟಿ, ಸಮಭಾವ …
ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗ ತಿಸಿ, ಎಲ್ಲ ವಿದ್ವಾಂಸರು ತಿಳಿಹೇಳಿದ ಧರ್ಮಗಳ ಸಂದೇಶ ಸಮದೃಷ್ಟಿ, ಸಮಭಾವ, ಸಹಬಾಳ್ವೆಗೆ ಪ್ರೇರಣೆ ನೀಡುತ್ತವೆ. ನಾನು ಧರ್ಮಾಧಿಕಾರಿ ಪೀಠವನ್ನು ಅಲಂಕರಿಸಿದ ದಿನದಿಂದ ದೇಶದಲ್ಲಿನ ವಿವಿಧ ಧರ್ಮಗಳ ಮಹತ್‌ ಸಂದೇಶಗಳನ್ನು, ಸದ್ವಿಚಾರ ಗಳನ್ನು ತಿಳಿದು ನಮ್ಮ ಪರಂಪರೆಯನ್ನು ಪಾಲಿಸುತ್ತಾ ಪ್ರಗತಿಪರ ಚಿಂತನೆ ಗಳೊಂದಿಗೆ ಪಾರಮಾರ್ಥಿಕ ಹಾಗೂ ಲೌಕಿಕ ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇನೆ ಎಂದು ತಿಳಿಸಿದರು.

ಬಸ್ರಿಕಟ್ಟೆ ಚರ್ಚಿನ ಧರ್ಮಗುರು ವಂ| ಮಾರ್ಸೆಲ್‌ ಪಿಂಟೊ, ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ಇ ವಾಲೀಕರ ಮತ್ತು ಕುರಿತು ಮೂಡುಬಿದಿರೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.

Advertisement

ತ್ಯಾಗದಿಂದ ಅಮೃತತ್ವ
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ವಕೀಲ ಎಂ.ಆರ್‌. ಸತ್ಯನಾರಾಯಣ ಮಾತನಾಡಿ, ತ್ಯಾಗದಿಂದ ಮಾತ್ರ ಅಮೃತತ್ವ ಕಾಣಬಹುದು. ಜಗತ್ತೇ ನಮ್ಮ ಕುಟುಂಬ ಎಂದು ಕಾಣುವ ಧರ್ಮವೊಂದಿದ್ದರೆ ಅದು ಹಿಂದೂ ಧರ್ಮ. ನಮ್ಮ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿಹೇಳದೆ ಶಾಲೆಗಳಲ್ಲಿ ಸೆಕ್ಯುಲರಿಸಂ ಎಲ್ಲವನ್ನು ತಿಂದುಹಾಕಿದೆ ಎಂದರು.

ಹೇಮಾವತಿ ವೀ. ಹೆಗ್ಗಡೆ, ವಿ.ಪ. ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ಡಿ. ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ ಕುಮಾರ್‌, ಡಿ. ರಾಜೇಂದ್ರ ಕುಮಾರ್‌ ಸಹಿತ ಕುಟುಂಬಸ್ಥರು, ಗಣ್ಯರು ಉಪಸ್ಥಿತರಿದ್ದರು.

ಸ್ಮತಿ ಇರಾನಿ ಅವರನ್ನು ಡಾ| ಹೆಗ್ಗಡೆ ದಂಪತಿ ಗೌರವಿಸಿದರು. ಪ್ರಧಾನಿ ಮೋದಿವರು ಕ್ಷೇತ್ರದ ಬಗೆಗೆ ವ್ಯಕ್ತಪಡಿಸಿದ ಅಭಿಪ್ರಾಯವನ್ನು ವೀಡಿಯೋ ಮೂಲಕ ಪ್ರದರ್ಶಿಸ ಲಾಯಿತು. ಅಧ್ಯಾಪಕ ಸುನಿಲ್‌ ಪಂಡಿತ್‌ ಮತ್ತು ಶ್ರದ್ಧಾ ಅಮಿತ್‌ ಸಮ್ಮಾನ‌ ಪತ್ರ ವಾಚಿಸಿದರು. ಧರ್ಮಸ್ಥಳ ಗ್ರಾ.ಪಂ. ಪಿಡಿಒ ಉಮೇಶ್‌ ಗೌಡ ವಂದಿಸಿದರು. ಎಸ್‌ಡಿಎಂ ಕಾಲೇಜಿನ ಉಪನ್ಯಾಸಕ ಡಾ| ಶ್ರೀಧರ ಭಟ್‌ ನಿರ್ವಹಿಸಿದರು.

ರಾಷ್ಟ್ರ ಮಟ್ಟದಲ್ಲಿ ಸಮ್ಮೇಳನ ಖ್ಯಾತಿ
89 ವರ್ಷಗಳ ಹಿಂದೆ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಪ್ರಾರಂಭಿಸಿದ ಸರ್ವಧರ್ಮ/ಸಾಹಿತ್ಯ ಸಮ್ಮೇಳನಗಳಲ್ಲಿ ಇಂದಿನ ವರೆಗೆ ಅನೇಕ ಮಹಾನುಭಾವರು ಭಾಗಿಗಳಾಗಿ ಅತ್ಯುತ್ತಮವಾದ ವಿಚಾರಗಳನ್ನು ತಿಳಿಸಿದ್ದಾರೆ. ಈ ಮೂಲಕ ರಾಷ್ಟ್ರ ಮಟ್ಟದಲ್ಲಿ ಈ ಸಮ್ಮೇಳನ ಮಹತ್ವ ಪಡೆದಿರುವುದು ಸಂತೋಷವನ್ನುಂಟುಮಾಡಿದೆ ಎಂದು ಡಾ| ಹೆಗ್ಗಡೆ ಹೇಳಿದರು.

ಯುದ್ಧ ಭೂಮಿಯಿಂದ ಪುಣ್ಯ ಭೂಮಿಗೆ
ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ಸ್ಮತಿ ಇರಾನಿ, ನಾನು ಯುದ್ಧ ಭೂಮಿಯಿಂದ ಶಿವ ನೆಲೆಸಿರುವ ಪುಣ್ಯ ಭೂಮಿಗೆ ಬಂದಿದ್ದೇನೆ. ಶಿವ-ಪಾರ್ವತಿ ರೂಪದಲ್ಲಿರುವ ಹೆಗ್ಗಡೆಯವರ ಆಶೀರ್ವಾದ ಪಡೆಯಲು ಶಿವನೇ ಕರೆಸಿರಬಹುದು ಎಂದುಕೊಂಡಿದ್ದೇನೆ ಎಂದು ಗುಜರಾತ್‌ ಚುನಾವಣೆ ವಿಚಾರವಾಗಿ ಮಾರ್ಮಿಕವಾಗಿ ಹೇಳಿದರು.

1 ಕೋಟಿ ಸೇವೆಯ ಕಾರ್ಡ್‌ ಬಿಡುಗಡೆ
ಎಸ್‌ಕೆಡಿಆರ್‌ಡಿಪಿ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 9,250 ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳಲ್ಲಿ ದಾಖಲೆಯ ಒಂದು ಕೋಟಿಯಷ್ಟು ಸಂಖ್ಯೆಯ ಸರಕಾರ ಹಾಗೂ ಇತರ ಸೇವೆಗಳನ್ನು ನೀಡಿದ್ದು, ಒಂದು ಕೋಟಿಯ ಸೇವೆಯನ್ನು ಸಚಿವೆ ಸ್ಮತಿ ಇರಾನಿ ಅವರು ಡಾ| ಹೆಗ್ಗಡೆ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಫ‌ಲಾನುಭವಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ: ಮಂಗಳೂರು: ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಕುಕ್ಕರ್‌ ಬಾಂಬ್‌ ಸ್ಫೋಟ?

Advertisement

Udayavani is now on Telegram. Click here to join our channel and stay updated with the latest news.

Next