ಬೆಂಗಳೂರು: “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್. ಪೈ ಅವರು ರಚಿಸಿದ “ಸ್ಮೃತಿ ಗಂಧವತೀ’ ಕೃತಿಯನ್ನು ಪ್ರಸಿದ್ಧ ಸಾಹಿತಿ ಡಾ| ಎಚ್. ಎಸ್. ವೆಂಕಟೇಶಮೂರ್ತಿ ಅವರು ಡಿ. 4ರಂದು ಬಿಡುಗಡೆಗೊಳಿಸಲಿದ್ದಾರೆ.
Advertisement
ಈ ಕಾರ್ಯಕ್ರಮವು ಅಂಕಿತ ಪುಸ್ತಕ ಪ್ರಕಾಶನ ಮತ್ತು ಬುಕ್ ಬ್ರಹ್ಮ ಸಹಯೋಗದಲ್ಲಿ ರವಿವಾರ ಪೂರ್ವಾಹ್ನ 11 ಗಂಟೆಗೆ ಬುಕ್ಬ್ರಹ್ಮ ಆನ್ಲೈನ್ ವೇದಿಕೆಯ ಮುಖಾಂತರ ಜರಗಲಿದೆ.
ಪ್ರಸಿದ್ಧ ಲೇಖಕಿ ನಂ. ನಾಗಲಕ್ಷ್ಮಿಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.