Advertisement

ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್‌

10:32 PM Jan 19, 2022 | Team Udayavani |

ದುಬಾೖ ಐಸಿಸಿ 2021ರ ಟಿ20 ತಂಡಗಳನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸ್ಥಾನ ಸಂಪಾದಿಸಿರುವ ಭಾರತದ ಏಕೈಕ ಆಟಗಾರ್ತಿಯೆಂದರೆ ಸ್ಮತಿ ಮಂಧನಾ. ಪುರುಷರ ತಂಡದಲ್ಲಿ ಭಾರತೀಯರ್ಯಾರೂ ಸ್ಥಾನ ಪಡೆಯದಿರು ವುದೊಂದು ಅಚ್ಚರಿ.

Advertisement

ಟಿ20 ತಂಡದ ಉಪನಾಯಕಿಯೂ ಆಗಿರುವ ಸ್ಮತಿ ಮಂಧನಾ, 2021ರ 9 ಪಂದ್ಯಗಳಲ್ಲಿ 31.87ರ ಸರಾಸರಿಯಲ್ಲಿ 255 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಅರ್ಧ ಶತಕ ಸೇರಿದೆ. ಇಂಗ್ಲೆಂಡಿನ ನಥನ್‌ ಶ್ರೀವರ್‌ ಈ ತಂಡದ ನಾಯಕಿ.

ಬಾಬರ್‌ ಆಜಂ ನಾಯಕತ್ವವನ್ನು ಹೊಂದಿರುವ ವರ್ಷದ ಪುರುಷರ ಟಿ20 ತಂಡದಲ್ಲಿ ಟೀಮ್‌ ಇಂಡಿಯಾದ ಯಾವುದೇ ಆಟಗಾರರು ಕಾಣಿಸಿ ಕೊಂಡಿಲ್ಲ.

ವರ್ಷದ ವನಿತಾ ಟಿ20 ತಂಡ: ಸ್ಮತಿ ಮಂಧನಾ, ಟಾಮಿ ಬ್ಯೂಮಂಟ್‌, ಡೇನಿಯಲ್‌ ವ್ಯಾಟ್‌, ಗಾಬಿ ಲೂಯಿಸ್‌, ನಥನ್‌ ಶ್ರೀವರ್‌ (ನಾಯಕಿ), ಆ್ಯಮಿ ಜೋನ್ಸ್‌, ಲಾರಾ ವೋಲ್ವಾರ್ಟ್‌, ಮರಿಜಾನ್‌ ಕಾಪ್‌, ಸೋಫಿ ಎಕಲ್‌ಸ್ಟೋನ್‌, ಲಾರಿನ್‌ ಫಿರಿ, ಶಬಿ°ಮ್‌ ಇಸ್ಮಾಯಿಲ್‌.

ವರ್ಷದ ಪುರುಷರ ಟಿ20 ತಂಡ: ಜಾಸ್‌ ಬಟ್ಲರ್‌, ಮೊಹಮ್ಮದ್‌ ರಿಜ್ವಾನ್‌, ಬಾಬರ್‌ ಆಜಂ (ನಾಯಕ), ಐಡನ್‌ ಮಾರ್ಕ್‌ರಮ್‌, ಮಿಚೆಲ್‌ ಮಾರ್ಷ್‌, ಡೇವಿಡ್‌ ಮಿಲ್ಲರ್‌, ತಬ್ರೇಜ್‌ ಶಮಿÕ, ಜೋಶ್‌ ಹ್ಯಾಝಲ್‌ವುಡ್‌, ವನಿಂದು ಹಸರಂಗ, ಮುಸ್ತಫಿಜುರ್‌ ರೆಹಮಾನ್‌, ಶಾಹೀನ್‌ ಶಾ ಅಫ್ರಿದಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next