Advertisement
ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್, ಧೂಮಪಾನದಿಂದ ಅಕ್ಕಪಕ್ಕದವರ(ಪ್ಯಾಸೀವ್ ಸ್ಮೋಕರ್)ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕರ್ನಾಟಕ ಧೂಮಪಾನ ನಿಷೇಧ ಹಾಗೂ ಧೂಮಪಾನಿಗಳಲ್ಲದವರ ಆರೊಗ್ಯ ರಕ್ಷಣೆ ಕಾಯ್ದೆ 2001 ರ ಪ್ರಕಾರ ಧೂಮಪಾನಕ್ಕೆ ನಿಷೇಧ ಹೇರಿ ಕಾನೂನು ಜಾರಿಗೊಳಿಸಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂ ಸಿದರೆ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದಿದ್ದಾರೆ.
Related Articles
Advertisement
ಅದರಲ್ಲೂ ಪುರುಷರು ಮಾಡುವ ಧೂಮಪಾನದಿಂದ ಅವರ ಪತ್ನಿಗೆ ಬಾಯಿ ಹಾಗೂ ಶ್ವಾಸಕೋಶ ಕ್ಯಾನ್ಸರ್ ಬರುತ್ತಿದೆ. ಹೀಗಾಗಿ, ಧೂಮಪಾನ ನಿಷೇಧ ತೀರ್ಮಾನವನ್ನು ಕಿದ್ವಾಯಿ ಸಂಸ್ಥೆ ಸ್ವಾಗತಿಸುತ್ತದೆ. ಜತೆಗೆ ಗುಟ್ಕ ಮತ್ತು ತಂಬಾಕುನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸತ್ತೇನೆ ಎಂದು ಕಿದ್ವಾಯಿ ಕ್ಯಾನ್ಸರ್ ಗಂಥಿ ಸಂಸ್ಥೆ ನಿರ್ದೇಶಕ ರಾಮಚಂದ್ರ ತಿಳಿಸಿದರು.
ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಬಾರ್‌ಗಳಲ್ಲಿ ಸಿಗರೇಟ್ ಮಾರಾಟಕ್ಕೆ ಅವಕಾಶವಿಲ್ಲ. ಆದರೆ, ನಮ್ಮ ಗ್ರಾಹಕರು ಹೊರಗಿನಿಂದ ತಂದು ಸೇದಿದರೆ ನಾವು ವಿರೋಧಿಸಿ ಗ್ರಾಹಕರೊಡನೆ ಜಗಳ ಮಾಡಲಾಗದು. ಏಕಾಏಕಿ ಧೂಮಪಾನ ನಿಷೇಧ ಮಾಡಿರುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ.
ಒಂದು ಕಡೆ ಲಿಕ್ಕರ್ ಖರೀದಿ ಜಾಸ್ತಿ ಮಾಡಿ ಎಂದು ಒತ್ತಡ ಹಾಕುತ್ತಾರೆ. ಇನ್ನೊಂದೆಡೆ ಇಂತಹ ಕಾನೂನು ಜಾರಿ ಮಾಡುತ್ತಾರೆ. ಇದರ ಬದಲು ಸಿಗರೇಟ್ ಉತ್ಪಾದನೆ ಹಾಗೂ ಮಾರಾಟವನ್ನೇ ನಿಷೇಧಿಸಬಹುದಲ್ಲ ಎಂದು ರಾಜ್ಯ ಮದ್ಯಮಾರಾಟಗಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಜನರ ಆರೋಗ್ಯ ಮುಖ್ಯ. ನಾವು ಧೂಮಪಾನ ನಿಷೇಧದ ಪರವಾಗಿದ್ದೇವೆ. ಈಗಾಗಲೇ ನಮ್ಮ ಎಲ್ಲ ರೆಸ್ಟೋರೆಟ್, ಸಸ್ಯಹಾರಿ – ಮಾಂಸಹಾರಿ ಹೋಟೆಲ್, ದರ್ಶಿನಿ, ಬೇಕರಿಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಗರೇಟ್ ನಿಷೇಧಿಸಿದರೆ ಉತ್ತಮ.-ಚಂದ್ರಶೇಖರ್ ಹೆಬ್ಟಾರ್, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷರು