Advertisement

ಪಾಲಿಕೆ ತ್ಯಾಜ್ಯದಿಂದ ಬೆಟ್ಟದಾಸನಪುರದಲ್ಲಿ ದಟ್ಟ ಹೊಗೆ

01:19 PM Jan 26, 2022 | Team Udayavani |

ಆನೇಕಲ್‌: ರಾತ್ರೋ ರಾತ್ರಿ ಬಿಬಿಎಂಪಿ ಕಸವನ್ನು ತಂದು ತಾಲೂಕಿನ ಹೊರವಲಯದ ಕ್ವಾರಿಗಳಲ್ಲಿ ಸುರಿದು ಕಸಕ್ಕೆ ಬೆಂಕಿ ಹಚ್ಚುತ್ತಿದ್ದು, ಮಂಗಳವಾರ ದಟ್ಟವಾದ ಹೊಗೆ ಕಾಣಿಸಿಕೊಂಡುಅಗ್ನಿಶಾಮಕ ದಳದವರು ಆಗಮಿಸಿ ಹೊಗೆ ನಿಯಂತ್ರಿಸಿದ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪದಲ್ಲಿ ಬೆಟ್ಟದಾಸನಪುರದಲ್ಲಿ ನಡೆದಿದೆ.

Advertisement

ಮಂಗಳವಾರ ಬೆಳಗ್ಗೆ ಹೊಗೆಯು ಬೆಟ್ಟದಾಸನಪುರ ಆವರಿಸಿದ್ದು, ಮನೆಯಲ್ಲಿನ ಮಕ್ಕಳು ಹಾಗೂ ವೃದ್ಧರು ಕೆಮ್ಮಲುಶುರು ಮಾಡಿದರು. ದನ ಕರು ಕುರಿ ಮೇಕೆ ಜತೆಗೆ ಇತರ ಸಾಕುಪ್ರಾಣಿಗಳು ಅಸಹಜವಾಗಿ ವರ್ತಿಸತೊಡಗಿದವು. ದಟ್ಟವಾದ ಹೊಗೆಯಿಂದ ಗ್ರಾಮಸ್ಥರು ಕಣ್ಣು ಉರಿ, ಮೈ ಕೈ ಕಡಿತಕ್ಕೆ ಗುರಿ ಯಾಗುತ್ತಿರುವುದು ಕಂಡು ಬಂದಿದೆ ಎಂದು ಗ್ರಾಪಂಸದಸ್ಯ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದರು. ಈ ಮೊದಲುಇದೇ ಪರಿಸ್ಥಿತಿ ಬಂದಾಗ ಗ್ರಾಮಸ್ಥರು ರಸ್ತೆ ತಡೆ ನೆಡೆಸಿ ಪ್ರತಿಭಟನೆ

ನಡೆಸಿದೆವು. ಬಿಬಿಎಂಪಿ ಅಧಿಕಾರಿಗಳು ಸ್ವತ್ಛತಾ ಉಪಕರಣಗಳನ್ನು ನೀಡುವ ಜೊತೆಗೆ ಆರೋಗ್ಯ ತಪಾ ಸಣಾ ತಂಡವನ್ನು ಕಳಿಸಿದ್ದರು. ಸೊಳ್ಳೆ ಹಾಗೂ ನೊಣಗಳ ಕಾಟವನ್ನು ತಪ್ಪಿಸಲು ಪರದೆಯನ್ನು ನೀಡಿದ್ದರು. ಅವೈಜ್ಞಾನಿಕ ವಾಗಿ ಹಳ್ಳಿಗಳಿಗೆ ತ್ಯಾಜ್ಯ ಸುರಿಯುತ್ತಿರುವ ಕಾರಣ ಜನ, ಜಾನುವಾರು ಹಾಗೂ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ರಾತ್ರೋರಾತ್ರಿ ಕಸದ ಲಾರಿಗಳು ಗ್ರಾಮದ ಸುತ್ತ ಮುತ್ತ ಕಸ ಸುರಿಯುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ರಸ್ತೆ ತಡೆಯುವುದರ ಜತೆಗೆ ತ್ಯಾಜ್ಯವನ್ನು ಬಿಬಿಎಂಪಿ ಕಚೇರಿ ಮುಂದೆ ಸುರಿಯಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next