Advertisement
ನಗರಗಳು ಬೆಳೆದಂತೆ ಅಲ್ಲೀ ಟ್ರಾಫಿಕ್ ಸಮಸ್ಯೆ ದಿನೇ ದಿನೇ ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ತಲುಪಬೇಕಾದ ಸ್ಥಳಗಳನ್ನು ನಿಗದಿತ ಸಮಯದಲ್ಲಿ ತಲುಪಲಾಗದೆ ಸಮಯದ ತಾಪತ್ರಯ ಒಂದು ಕಡೆಯಾದರೆ, ಫ್ಲ್ಯಾಟ್ ಮಾಡಿಕೊಂಡವರಿಗೆ ಮತ್ತು ಇಲ್ಲೇ ಹೆಚಾಗಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸಿಕೊಂಡವರಿಗೆ ವಾಹನಗಳ ವಿಷಕಾರಿ ಅನಿಲ ಆರೋಗ್ಯದ ಮೇಲೆ ಪರಿ ಣಾಮ ಬೀರಿ ನಾನಾ ವಿಧದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ನಗರದಲ್ಲಿ ಶುದ್ಧ ಗಾಳಿ ಬೇಕೆಂದರೆ ಅಲ್ಲೇ ಇರುವ ಪಾರ್ಕ್ ಒಂದೇ ದಾರಿ. ಅದು ಬಿಟ್ಟರೆ ಬೇರೆ ದಾರಿಗಳು ಉಳಿದಿಲ್ಲ.
Related Articles
Advertisement
ಇದು ಹೇಗೆ ಕೆಲಸ ಮಾಡುತ್ತದೆ? ತಾಮ್ರದ ಸುರುಳಿಗನ್ನು ಹೊಂದಿರುವ ಈ ತಂತ್ರಜ್ಞಾನ ಹ್ಯಾಂಡಲಾºರ್ಗಳ ಮೇಲೆ ಒಂದು ಸಣ್ಣ ಪೆಟ್ಟಿಗೆಯಲ್ಲಿ ವಿದ್ಯುನ್ಮಾನವಾಗಿ ವಾಯುಗಾಮಿ ಕಣಗಳನ್ನು ಚಾರ್ಜ್ ಮಾಡುತ್ತದೆ ಮತ್ತು ಫಿಲ್ಟರ್‌ಗಳ ಸಹಾಯದಿಂದ ಅವುಗಳನ್ನು ಉಳಿಸಿಕೊಳ್ಳುತ್ತವೆ. ಇದು ರೂಸ್‌ಗಾರ್ಡೆಸ್‌ನ ಸ್ಮಾಗ್ ಫ್ರೀ ಟವರ್ ಶುದ್ಧೀಕರಿಸುತ್ತದೆ. ಈ ತಂತ್ರಜ್ಞಾನದ ಮೂಲಕ 30,000 ಕ್ಯೂಬಿಕ್ ಮೀಟರ್ ಗಾಳಿಯನ್ನು ಸðಬ್ಬಿಂಗ್ ಮಾಡಲು ಸಮರ್ಥವಾಗಿದೆ. ಮಂಗಳೂರಿಗೂ ಬರಲಿ
ಟ್ರಾಫಿಕ್ ಸಮಸ್ಯೆಯನ್ನು ದಟ್ಟವಾಗಿ ಎದುರಿಸುತ್ತಿರುವ ಮಂಗಳೂರು ಈಗಲೇ ಇಂತಹ ಪ್ರಯೋಗಗಳಿಗೆ ಒಗ್ಗಿಕೊಂಡರೆ ಮುಂದೆ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಮಂಗಳೂರಿನ ಆಡಳಿತ ಮಂಡಳಿ ಕೆಲವೊಂದು ವಿದೇಶಿ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ. – ವಿಶ್ವಾಸ್ ಅಡ್ಯಾರ್