Advertisement

ಸ್ಮಿತ್‌, ಕೊಹ್ಲಿ ದಾಖಲೆ ಮುರಿದ ನೇಪಾಲ ನಾಯಕ

09:56 AM Oct 01, 2019 | sudhir |

ಸಿಂಗಾಪುರ: ನೇಪಾಲ, ಸಿಂಗಾಪುರ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ತ್ರಿಕೋನ ಟಿ20 ಕೂಟದಲ್ಲಿ ನೇಪಾಲ ತಂಡದ ನಾಯಕ ಪರಸ್‌ ಖಡ್ಕ ಹೊಸದೊಂದು ವಿಶ್ವದಾಖಲೆ ಮಾಡಿ ಮೆರೆದಾಡಿದ್ದಾರೆ. ಸಿಂಗಾಪುರ ವಿರುದ್ಧ ನಡೆದ ಪಂದ್ಯದಲ್ಲಿ ಚೇಸಿಂಗ್‌ ಮಾಡುವಾಗ ಖಡ್ಕ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಚೇಸಿಂಗ್‌ನಲ್ಲಿ ಸೆಂಚುರಿ ಬಾರಿಸಿದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

Advertisement

ನೇಪಾಲದ ಪರವಾಗಿ ದಾಖಲಾದ ಮೊದಲ ಟಿ20 ಸೆಂಚುರಿ ಎಂಬ ಹಿರಿಮೆಗೂ ಈ ಶತಕ ಪಾತ್ರವಾಗಿದೆ. ನೇಪಾಲದ ಹೆಚ್ಚಿನೆಲ್ಲ ಬ್ಯಾಟಿಂಗ್‌ ದಾಖಲೆಗಳು ಖಡ್ಕ ಹೆಸರಿನಲ್ಲೇ ಇವೆ. ಸಿಂಗಾಪುರದ ವಿರುದ್ಧದ ಪಂದ್ಯದಲ್ಲಿ ಅವರು 49 ಎಸೆತಗಳಲ್ಲಿ ಸೆಂಚುರಿ ಮಾಡಿದ್ದಾರೆ. ಅವರ ಒಟ್ಟಾರೆ ಗಳಿಕೆ 52 ಎಸೆತಗಳಲ್ಲಿ 106 ರನ್‌. ಏಶ್ಯದ ತಂಡಗಳ ನಾಯಕರ ನಾಲ್ಕನೇ ಅತೀ ವೇಗದ ಶತಕ ಎಂಬ ದಾಖಲೆಯೂ ನಿರ್ಮಾಣವಾಗಿದೆ. ಈ ಶತಕ 7 ಬೌಂಡರಿ ಮತ್ತು 9 ಸಿಕ್ಸರ್‌ಗಳಿಂದ ಸಿಂಗಾರಗೊಂಡಿತ್ತು.

ಸ್ಕಾಟ್‌ಲ್ಯಾಂಡ್‌ ವಿರುದ್ಧ ನೆದರ್ಲೆಂಡ್‌ ನಾಯಕ ಪೀಟರ್‌ ಸೀಲರ್‌ ಬಾರಿಸಿದ ಅಜೇಯ 96 ರನ್‌ ಇಷ್ಟರ ತನಕ ಚೇಸಿಂಗ್‌ನಲ್ಲಿ ನಾಯಕರೊಬ್ಬರ ಗರಿಷ್ಠ ಗಳಿಕೆಯಾಗಿತ್ತು. 12 ದಿನಗಳ ಹಿಂದೆಯಷ್ಟೇ ನಿರ್ಮಾಣವಾಗಿದ್ದ ಈ ದಾಖಲೆಯನ್ನು ಖಡ್ಕ ಮುರಿದಿದ್ದಾರೆ. ಈ ಸಾಧನೆಯ ಪಟ್ಟಿಯಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ (2015ರಲ್ಲಿ ಇಂಗ್ಲಂಡ್‌ ವಿರುದ್ಧ 90)ನಾಲ್ಕನೇ ಮತ್ತು ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌ (2009ರಲ್ಲಿ ಆಸ್ಟ್ರೇಲಿಯ ವಿರುದ್ಧ 88) ಐದನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ಶ್ರೀಲಂಕಾ ವಿರುದ್ಧ ಚೇಸಿಂಗ್‌ ಮಾಡುವಾಗ ವಿರಾಟ್‌ ಕೊಹ್ಲಿ 82 ರನ್‌ ಬಾರಿಸಿದ್ದರು. ಅರ್ಥಾತ್‌ ಕ್ರಿಕೆಟ್‌ ದಿಗ್ಗಜರಾದ ಸ್ಮಿತ್‌ ಮತ್ತು ಕೊಹ್ಲಿಗಿಂತಲೂ ಖಡ್ಕ ದಾಖಲೆಯೇ ಉತ್ತಮವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next