Advertisement

SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್!‌ ಆಗಿದ್ದೇನು?

11:10 AM Dec 16, 2024 | Team Udayavani |

ಬೆಂಗಳೂರು: ದೇಶಿಯ ಟಿ20 ಟೂರ್ನಿ ಸಯ್ಯದ್‌ ಮುಷ್ತಾಕ್‌ ಅಲಿ (Syed Mushtaq Ali Trophy) ಕೂಟದ ಫೈನಲ್‌ ಪಂದ್ಯದಲ್ಲಿ ನಡೆದ ಪ್ರಮಾದವೊಂದರ ಬಗ್ಗೆ ಮೂರನೇ ಅಂಪೈರ್‌ ಕ್ಷಮೆಯಾಚಿಸಿದ ಘಟನೆ ರವಿವಾರ ನಡೆದಿದೆ. ಮುಂಬೈ ಮತ್ತು ಮಧ್ಯಪ್ರದೇಶ ನಡುವಿನ ಫೈನಲ್‌ ಪಂದ್ಯದಲ್ಲಿ ಈ ಪ್ರಸಂಗ ನಡೆದಿದೆ.

Advertisement

ಶಾರ್ದೂಲ್ ಠಾಕೂರ್ ಅವರ ಎಸೆತವನ್ನು ‌ಮಧ್ಯಪ್ರದೇಶ ನಾಯಕ ರಜತ್ ಪಾಟಿದಾರ್ (Rajat Patidar) ಆಫ್ ಸ್ಟಂಪ್‌ ನ ಹೊರಗೆ ಆಡಲು ಹೋದರೂ ವೈಡ್ ನೀಡಲಾಯಿತು. ಆದರೆ, ಬ್ಯಾಟರ್ ಎಸೆತದ ಕಡೆಗೆ ಚಲಿಸಿದ್ದಾರೆ ಎಂದು ಟಿವಿ ಅಂಪೈರ್ ವೈಡ್‌ ನಿರ್ಧಾರವನ್ನು ರದ್ದುಗೊಳಿಸಿದರು.

ಇದರಿಂದ ಕೋಪಗೊಂಡ ರಜತ್ ಪಾಟಿದಾರ್ ಮೈದಾನದಿಂದ ಹೊರ‌ ಹೋಗಲಿಲ್ಲ. ಚೆಂಡು ಪಾಪಿಂಗ್ ಕ್ರೀಸ್‌ನಲ್ಲಿ ಪಿಚ್ ಆಗಿದ್ದರಿಂದ ಮತ್ತೆ ರಿವೀವ್‌ ಮಾಡುವಂತೆ ಕೇಳಿಕೊಂಡರು. ಈ ನಿರ್ಧಾರವನ್ನು ಟಿವಿ ಅಂಪೈರ್ ಅಂತಿಮವಾಗಿ ರದ್ದುಗೊಳಿಸಿ ವೈಡ್‌ ನೀಡಿದರು.

“ಕ್ಷಮಿಸಿ, ಚೆಂಡು ಪಾಪಿಂಗ್ ಕ್ರೀಸ್‌ನ ಹೊರಗೆ ಪಿಚ್ ಆಗಿತ್ತು. ನಾನು ಅದನ್ನು ನೋಡಲಿಲ್ಲ” ಎಂದು ಟಿವಿ ಅಂಪೈರ್‌ ಕೆ.ಎನ್. ಅನಂತಪದ್ಮನಾಭನ್ ಹೇಳಿದ್ದು ನೇರ ಪ್ರಸಾರದಲ್ಲಿ ಕೇಳಿಸಿದೆ.

Advertisement

ಪಂದ್ಯದ ವಿಚಾರಕ್ಕೆ ಬರುವುದಾದರೆ ಮುಂಬೈ ತಂಡವು ಮಧ್ಯಪ್ರದೇಶವನ್ನು ಸೋಲಿಸಿ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಮಧ್ಯಪ್ರದೇಶ ತಂಡವು 174 ರನ್‌ ಗಳಿಸಿದರೆ, ಮುಂಬೈ ತಂಡವು 17.5 ಓವರ್‌ ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. ಮಧ್ಯಪ್ರದೇಶ ಪರ ನಾಯಕ ರಜತ್‌ ಪಾಟಿದಾರ್‌ ಅಜೇಯ 81 ರನ್‌ ಮಾಡಿದರೆ, ಮುಂಬೈ ಪರ ಸೂರ್ಯಕುಮಾರ್‌ ಯಾದವ್‌ 48 ರನ್‌, ಸೂರ್ಯಾಂಶ್‌ ಶೆಡ್ಗೆ 15 ಎಸೆತಗಳಲ್ಲಿ ಅಜೇಯ 36 ರನ್‌ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next