Advertisement

ಸ್ಮಾರ್ಟ್‌ ಟಿವಿಗಳು ಈಗ ಬಜೆಟ್‌ ದರದಲ್ಲಿ

06:00 AM Oct 15, 2018 | |

ನಮ್ಮ ಮನೆಗಳಲ್ಲಿದ್ದ ಡಬ್ಬದಂಥ ಸಾಂಪ್ರದಾಯಿಕ ಟಿವಿಗಳು ಹೋಗಿ ಸ್ಮಾರ್ಟ್‌ ಟಿವಿಗಳು ಬಂದಿವೆ. ಮೊಬೈಲ್‌ಗ‌ಳು ಸ್ಮಾರ್ಟ್‌ ಆದ ಮೇಲೆ, ಟಿವಿಗಳು ಸುಮ್ಮನಿರುತ್ತಾವಾ?! ಅವು ಸ್ಮಾರ್ಟ್‌ ಆಗಿವೆ! ಸ್ಮಾರ್ಟ್‌ಟಿವಿಗಳಿಗೆ ಅಂಡ್ರಾಯ್ಡ ಆಪರೇಟಿಂಗ್‌ ಸೌಲಭ್ಯ ಸಹ ಬಂದು ಬಿಟ್ಟಿದೆ. ಮಧ್ಯಮ ವರ್ಗದ ಜನ ಕೊಳ್ಳಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿದ್ದ ಸ್ಮಾರ್ಟ್‌ ಟಿವಿಗಳನ್ನು ಕೊಳ್ಳುವಂತೆ ಮಾಡಿದ ಶ್ರೇಯ ಶಿಯೋಮಿ ಕಂಪೆನಿಗೆ ಸಲ್ಲಬೇಕು.  ಆ ಕಂಪೆನಿ ಇತ್ತೀಚಿಗೆ 3 ಹೊಸ ಮಾಡೆಲ್‌ಗ‌ಳನ್ನು ಭಾರತಕ್ಕೆ ಬಿಡುಗಡೆ ಮಾಡಿದೆ. 

Advertisement

ನಿನ್ನೆ ರಾತ್ರಿ ಮಗಳು ಜಾನಕಿ ಧಾರಾವಾಹಿ ನೋಡಲಾಗಲಿಲ್ಲ ಅಂದ  ಅಮ್ಮನಿಗೆ, ಮಗಳು ಮೊಬೈಲ್‌ನಲ್ಲಿ  ವೂಟ್‌ ಆ್ಯಪ್‌ ತೆರೆದು ನಿನ್ನೆ ಸಂಚಿಕೆ ನೋಡಮ್ಮ ಅಂತ  ತೋರಿಸುತ್ತಾಳೆ. ಆರು ಇಂಚಿನ ಪರದೆಯಲ್ಲಿ ಅದನ್ನು ನೋಡೋದು ಕೊಂಚ ತ್ರಾಸದಾಯಕವೇ. ಮಿಸ್‌ ಆಗಿರುವ ಧಾರಾವಾಹಿಗಳನ್ನು ನಮಗೆ ಬೇಕಾದಾಗ ಟಿವಿಯಲ್ಲೇ  ನೋಡುವಂತಿದ್ದರೆ ಎಷ್ಟು ಚೆನ್ನ ಅಂತ ಅನಿಸದಿರದು. ಆ ಅನಿಸಿಕೆಗಳನ್ನು ಸ್ಮಾರ್ಟ್‌ ಟಿವಿಗಳು ನಿಜ ಮಾಡಿವೆ. 

ಮೊಬೈಲ್‌ಗ‌ಳು ಸ್ಮಾರ್ಟ್‌ ಆದ ಮೇಲೆ, ನಮ್ಮ ಟಿವಿಗಳು ಸುಮ್ಮನಿರುತ್ತವಾ?! ಅವೂ ಸ್ಮಾರ್ಟ್‌ ಆಗಿವೆ.  21 ಇಂಚಿನ ಭಾರೀ ಭಾರದ, ಡಬ್ಬದಂಥ ಮಾಮೂಲಿ ಟಿವಿಗಳು ಇನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ಮಾಯವಾಗಲಿವೆ. ಸ್ಮಾರ್ಟ್‌ ಟಿವಿಗಳೂ ಬಂದು, ಅವುಗಳದೇ ಇನ್ನು ಜಮಾನ ಎನ್ನುತ್ತ ಸಂಭ್ರಮ ಪಡುತ್ತಿರುವಾಗ,  ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಸ್ಮಾರ್ಟ್‌ ಟಿವಿಗಳಿಗೆ ಅಂಡ್ರಾಯ್ಡ ಸಹ ಸೇರಿಕೊಂಡು, ಈಗ ಟ್ರೆಂಡ್‌ ಸೃಷ್ಟಿಸಿವೆ. ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಅಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ  ಟಿವಿಗಳಿಗೂ ಬಂದಿದೆ. ಅಂಡ್ರಾಯ್ಡ ಪ್ಲೇ ಸ್ಟೋರ್‌ ಆ್ಯಪ್‌ ಮೂಲಕ ಟಿವಿಯಲ್ಲೇ ದೃಶ್ಯಕ್ಕೆ ಸಂಬಂಧಿಸಿದ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿ ಟಿವಿ ಕಾರ್ಯಕ್ರಮಗಳು, ಸಿನಿಮಾ, ಸಂಗೀತ ಇತ್ಯಾದಿಗಳನ್ನು ನೋಡಬಹುದಾಗಿದೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಂ ವಿಡಿಯೋ, ವೂಟ್‌, ಯೂ ಟ್ಯೂಬ್‌ ಇತ್ಯಾದಿಗಳ ಮೂಲಕ ಮೊಬೈಲ್‌ನಲ್ಲಿ ಕಣ್ಣು ಕಿರಿದಾಗಿಸಿಕೊಂಡು ನೋಡುತ್ತಿದ್ದ ಸಿನಿಮಾ, ಧಾರಾವಾಹಿಗಳನ್ನು ಬೇಕೆಂದಾಗ  ಟಿವಿಯಲ್ಲೇ ನೋಡಬಹುದಾಗಿದೆ.  ಜೊತೆಗೆ ನಿಮ್ಮ ಕೈಯಲ್ಲಿರುವ ಮೊಬೈಲ್‌ ಅನ್ನು ಸ್ಮಾರ್ಟ್‌ ಟಿವಿಗೆ ವೈಫೈ ಅಥವಾ ಬ್ಲೂಟೂತ್‌ ಮೂಲಕ ಕಾಸ್ಟ್‌ ಮಾಡಿಕೊಂಡು ನಿಮ್ಮ ಮೊಬೈಲ್‌ನಲ್ಲಿರುವ ವಿಡಿಯೋಗಳನ್ನೇ ಅಲ್ಲಿ ನೋಡುವ ಅವಕಾಶವಿದೆ.

ಎಲ್ಲ ಸರಿ, ಇಂಥ ಟಿವಿಗಳು ಮಧ್ಯಮ ವರ್ಗದ ಜನರ ಕೈಗೆ ಎಲ್ಲಿ ಎಟುಕುತ್ತವೆ? 32, 43, 55 ಇಂಚಿನ ಟಿವಿಗಳನ್ನು ಕೊಳ್ಳಬೇಕಾದರೆ 50 ಸಾವಿರದಿಂದ ಆರಂಭಿಸಿ, 2 ಲಕ್ಷ  ರೂ. ಮೇಲೆ ಹಣ ನೀಡಬೇಕು ಎಂಬ ಪರಿಸ್ಥಿತಿ ಇತ್ತು. ಸೋನಿ, ಸ್ಯಾಮ್‌ಸಂಗ್‌, ಎಲ್‌ಜಿ ಬ್ರಾಂಡ್‌ನ‌ಲ್ಲಿರುವ ಸ್ಮಾರ್ಟ್‌ ಟಿವಿಗಳು ದುಬಾರಿ ಎನಿಸುತ್ತಿದ್ದವು. ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಶಿಯೋಮಿ (ಎಂಐ-ಮಿ) ಕಂಪೆನಿ ತನ್ನ ಸ್ಮಾರ್ಟ್‌ ಟಿವಿಗಳನ್ನು ಯಾವಾಗ ಭಾರತದ ಮಾರುಕಟ್ಟೆಗೆ ಆನ್‌ಲೈನ್‌ಬಿಟ್ಟಿತೋ, ಸಾಮಾನ್ಯ ಜನರೂ ಸ್ಮಾರ್ಟ್‌ ಟಿವಿಗಳನ್ನು ಕೊಳ್ಳುವಂತಾಯಿತು. (ಈ ನಿಟ್ಟಿನಲ್ಲಿ ವಿಯು ಎಂಬ ಇನ್ನೊಂದು ಬ್ರಾಂಡ್‌ ಸಹ ಹೆಸರಿಸಬಹುದು.) ಇತ್ತೀಚೆಗೆ 3 ಸ್ಮಾರ್ಟ್‌ ಟಿವಿಗಳನ್ನು ಮಿ ಕಂಪೆನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಇವುಗಳಿಗೆ ಎಂಐ ದೇ ಆದ ಪ್ಯಾಚ್‌ವಾಲ್‌ ಯೂಸರ್‌ ಇಂಟರ್‌ಫೇಸ್‌ ಇದ್ದು, ಜೊತೆಗೆ ಇದಕ್ಕೆ ಅಫಿಷಿಯಲ್‌ ಅಂಡ್ರಾಯ್ಡ ವ್ಯವಸ್ಥೆಯನ್ನೂ ಕಲ್ಪಿಸಿದೆ. (ಇದುವರೆಗೆ ಬಿಟ್ಟಿದ್ದ ಮಾಡೆಲ್‌ಗ‌ಳಿಗೂ ಶೀಘ್ರವೇ ಅಂಡ್ರಾಯ್ಡ  ಅಪ್‌ಡೇಟ್‌ ನೀಡುವುದಾಗಿ ಕಂಪೆನಿ ತಿಳಿಸಿದೆ.)   ಎಂಐ ರಿಮೋಟ್‌ನಲ್ಲಿ ಗ್ರಾಹಕರು ತಮಗೆ ಬೇಕಾದ (ಪ್ಯಾಚ್‌ವಾಲ್‌ ಅಥವಾ ಅಂಡ್ರಾಯ್ಡ) ಇಂಟರ್‌ಫೇಸ್‌ ಅನ್ನು ಬದಲಿಸಿಕೊಂಡು ಟಿವಿ ವೀಕ್ಷಿಸಬಹುದಾಗಿದೆ. ಜೊತೆಗೆ ರಿಮೋಟ್‌ನಲ್ಲಿ ಮೀಸಲಾದ ವಾಯ್ಸ ಸರ್ಚ್‌ ಬಟನ್‌ ಇದ್ದು, ಗೂಗಲ್‌ ವಾಯ್ಸ ಸರ್ಚ್‌ನಲ್ಲಿ ಧ್ವನಿಯಿಂದಲೇ ಆದೇಶ ನೀಡುವ ಆಯ್ಕೆ ಕೂಡ ಇದೆ. ತನ್ನ  ಪ್ಯಾಚ್‌ ವಾಲ್‌ ಕಂಟೆಂಟ್‌ಗಳ ಜೊತೆಗೆ, ಎರೋಸ್‌ ನೌ, ಜಿಯೋ ಸಿನಿಮಾ, ಹೂಕ್‌, ಎಪಿಕ್‌ ಸಹ ಇರಲಿದ್ದು, ಶೀಘ್ರವೇ ಪ್ಯಾಚ್‌ವಾಲ್‌ನಲ್ಲಿ ಅಮೆಜಾನ್‌ ಪ್ರೈಂ ವಿಡಿಯೋ ಸೌಲಭ್ಯ ವನ್ನು ಅಪ್‌ಡೇಟ್‌ ಮಾಡುವುದಾಗಿ ತಿಳಿಸಿದೆ. ಆದರೆ ನೆಟ್‌ಫ್ಲಿಕ್ಸ್‌ ಬಗ್ಗೆ ಕಂಪೆನಿ ಮಾಹಿತಿ ನೀಡಿಲ್ಲ. ಹೊಸ ಮಾಡೆಲ್‌ಗ‌ಳ ವಿವರ ಇಲ್ಲಿದೆ.

ಎಂಐ 4ಸಿ ಪ್ರೊ. 32 ಇಂಚಿನ ಅಂಡ್ರಾಯ್ಡ  ಎಲ್‌ಇಡಿ ಟಿವಿ: 32 ಇಂಚಿನ,  ಅಂಡ್ರಾಯ್ಡ ಓರಿಯೋ ಆಪರೇಟಿಂಗ್‌ ಸಿಸ್ಟಂ ಇರುವ ಈ ಟಿವಿಯಲ್ಲಿ 8 ಜಿಬಿ ಆಂತರಿಕ ಸ್ಟೋರೇಜ್‌, 1 ಜಿಬಿ ರ್ಯಾಮ್‌ ಇದೆ.20 ವ್ಯಾಟ್‌ ಸೌಂಡ್‌ ಔಟ್‌ಪುಟ್‌, ಡಿಟಿಎಸ್‌ ಸೌಲಭ್ಯ ಇದ್ದು, ಎಚ್‌ಡಿ ರೆಡಿ (1366*768) ಡಿಸ್‌ಪ್ಲೇ ಹೊಂದಿದೆ. ಕ್ರೋಂಕಾಸ್ಟ್‌, ಗೂಗಲ್‌ ವಾಯ್ಸ ಸರ್ಚ್‌ ಹೊಂದಿದೆ. ಅಮೆಜಾನ್‌ ನಲ್ಲಿ ಮಾತ್ರ ಲಭ್ಯ. ದರ 14,999 ರೂ. ಚಿಕ್ಕ ಹಾಲ್‌ ಇರುವ ಮನೆಗಳಿಗೆ 32 ಇಂಚಿನ ಟಿವಿ ಸಾಕು.

Advertisement

ಎಂಐ 4 ಎ ಪ್ರೊ, 49 ಇಂಚಿನ ಅಂಡ್ರಾಯ್ಡ ಎಲ್‌ಇಡಿ ಟಿವಿ: 49 ಇಂಚಿನ ಈ ಟಿವಿ ಫ‌ುಲ್‌ ಎಚ್‌ಡಿ, ಎಚ್‌ಡಿಆರ್‌ ಡಿಸ್‌ಪ್ಲೇ ಹೊಂದಿದೆ (1920*1080). 2 ಜಿಬಿ ರ್ಯಾಮ್‌, 8 ಜಿಬಿ ಆಂತರಿಕ ಸಂಗ್ರಹ, 20 ವ್ಯಾಟ್‌ ನ ಸ್ಟೀರಿಯೋ ಸ್ಪೀಕರ್‌ ಇವೆ., ಗೂಗಲ್‌ ವಾಯ್ಸ ಸರ್ಚ್‌, ಇದ್ದು ಇದೂ ಕೂಡ ಅಂಡ್ರಾಯ್ಡ ಓರಿಯೋ (8.1) ಆಪರೇಟಿಂಗ್‌ ಸಿಸ್ಟ್‌ಂ ಹೊಂದಿದೆ. ದೊಡ್ಡ ಹಾಲ್‌ಗ‌ಳಿಗೆ ಸೂಕ್ತವಾಗಿದೆ. ಇದು ಸಹ ಅಮೇಜಾನ್‌ನಲ್ಲಿ ಲಭ್ಯವಿದ್ದು, 29,990 ರೂ. ದರವಿದೆ.

ಎಂಐ 4 ಪ್ರೊ. 55 ಇಂಚಿನ ಎಲ್‌ಇಡಿ ಅಂಡ್ರಾಯ್ಡ ಟಿವಿ:  ಇದು, ಅಲ್ಟ್ರಾ ಎಚ್‌ಡಿ, 4ಕೆ  (3840*2160) ಡಿಸ್‌ಪ್ಲೇ ಹೊಂದಿರುವ ಟಿವಿ. ಅಂದರೆ ನಿಮಗೆ ದೃಶ್ಯಗಳು ಇನ್ನಷ್ಟು ಸೂಕ್ಷ್ಮವಾಗಿ, ನಯವಾಗಿ ಕಾಣುತ್ತವೆ. 16 ವ್ಯಾಟ್‌° ಡಾಲ್ಬಿ ಡಿಟಿಎಸ್‌ ಧ್ವನಿ ವ್ಯವಸ್ಥೆ ಇದೆ. ಅಂಚುಪಟ್ಟಿ ಇಲ್ಲದ (ಬೆಜೆಲ್‌ ಲೆಸ್‌) ಡಿಸ್‌ಪ್ಲೇ ಇದೆ. 2 ಜಿಬಿ ರ್ಯಾಮ್‌, 8 ಜಿಬಿ ಆಂತರಿಕ ಸಂಗ್ರಹ ಇದೆ. ಅಂಡ್ರಾಯ್ಡ ಓರಿಯೋ, ಅಮ್‌ಲಾಜಿಕ್‌ 64 ಬಿಟ್‌, ಕ್ವಾಡ್‌ಕೋರ್‌ ಪ್ರೊಸೆಸರ್‌ ಹೊಂದಿದೆ.  ಈ ಮಾಡೆಲ್‌ ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತಿದೆ. ದರ 49999 ರೂ. 55 ಇಂಚಿನ ಟಿವಿ ಚಿಕ್ಕ ಮನೆಗಳ ಹಾಲ್‌ಗ‌ಳಿಗೆ ಸೂಕ್ತವಲ್ಲ.

ಈ ಟಿವಿಗಳನ್ನು ನೀವು ಆನ್‌ಲೈನ್‌ ಮೂಲಕ ಖರೀದಿಸಿ, ನಿಮ್ಮ ಮನೆಗೆ ಡೆಲಿವರಿಯಾದ ಬಳಿಕ ಕಂಪೆನಿಯ ಸರ್ವಿಸ್‌ ಇಂಜಿನಿಯರ್‌ ಮನೆಗೇ ಬಂದು ಇನ್ಸ್‌ಸ್ಟಾಲ್‌ ಮಾಡಿ, ಡೆಮೋ ತೋರಿಸಿ ಹೋಗುತ್ತಾರೆ. ಒಂದು ವರ್ಷದ ರೆಗುಲರ್‌ ವಾರಂಟಿ ಜೊತೆಗೆ, ಕೊಂಚ ಹಣ ತೆತ್ತು ಇನ್ನೆರಡು ವರ್ಷ ವಿಸ್ತರಿಸಿಕೊಳ್ಳುವ ಅವಕಾಶ ಇದೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next