Advertisement
ಸ್ಮಾರ್ಟ್ಫೋನ್ಪೋಷಣ್ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ, ಸರಕಾರ ಈಗಾಗಲೇ ಜಾರಿಗೊಳಿಸಿರುವ ಸ್ನೇಹ ಆ್ಯಪ್ (ಸೊಲ್ಯೂಷನ್ ಫಾರ್ ನ್ಯೂಟ್ರಿಶನ್ ಆ್ಯಂಡ್ ಎಫೆಕ್ಟಿವ್ ಹೆಲ್ತ್ ಎಕ್ಸೆಸ್) ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗಿದೆ.
ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ಪಡೆದು, ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೇಂದ್ರ ಸರಕಾರದ ಯೋಜನೆಯೇ ಪೋಷಣ್ ಅಭಿಯಾನ. ಈ ಯೋಜನೆಯಡಿ ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರು 1,000 ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರಸೇವನೆ ಮಾಡುವುದು, ರಕ್ತ ಹೀನತೆ, ಅತಿಸಾರ ಭೇದಿ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಮುಖ್ಯ ಉದ್ದೇಶ.
Related Articles
ಡಿಸೆಂಬರ್‌ನಿಂದ ಈ ಮೊಬೈಲ್‌ಗಳ ಮೂಲಕವೇ ದಾಖಲಾತಿ ನಿರ್ವಹಣೆಯಾಗಲಿದೆ. ಆ ಬಳಿಕ ಕಾಗದ ಪತ್ರಗಳಲ್ಲಿ ದಾಖಲೆ ಬರೆದಿಡಬೇಕಾದ ಅವಶ್ಯವಿಲ್ಲ. ಗರ್ಭಿಣಿ, ಬಾಣಂತಿಯರ ಆರೋಗ್ಯ ಮಾಹಿತಿ, ಪೌಷ್ಟಿಕ ಆಹಾರ ವಿತರಣೆ ಮಾಹಿತಿ, ಅಂಗನವಾಡಿಗಳ ಮಾಹಿತಿ, ಐಎಫ್ಎ ಮಾತ್ರೆ ವಿತರಣೆ ಮಾಹಿತಿ ಇತ್ಯಾದಿಗಳು ಪೂರ್ವ ಅಳವಡಿತ ತಂತ್ರಾಂಶದ ಮೂಲಕ ತುಂಬಲಾಗುವುದು. ಇದರಿಂದಾಗಿ ಕ್ಷಣಾರ್ಧದಲ್ಲಿ ದೇಶದ ಅಷ್ಟೂ ಅಂಗನವಾಡಿಗಳ ಅಂಕಿಅಂಶದ ಮಾಹಿತಿ ಕೇಂದ್ರ, ರಾಜ್ಯ ಸರಕಾರಗಳಿಗೆ ದೊರೆಯಲಿದೆ. ಇದು ಮುಂದಿನ ಯೋಜನೆಗಳ ನಿರ್ಧಾರ, ಅನುದಾನ, ವಸ್ತುಗಳ ಬಿಡುಗಡೆಗೆ ಅನುಕೂಲವಾಗಲಿದೆ. ಯೋಜನೆ ಯಶಸ್ವಿಯಾಗಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಯೋಜನೆಗಳ ಅನುಷ್ಠಾನ ವಿಧದಲ್ಲಿ ಬೇಕಾದ ಬದಲಾವಣೆಗಳನ್ನು ತರಲು ಅನುಕೂಲವಾಗಲಿದೆ.
Advertisement
ವಿತರಿಸಲಾಗಿದೆಸ್ಮಾರ್ಟ್ ಫೋನ್ ವಿತರಣೆಗೆ ಬಂದಿದ್ದು ಅದರಂತೆ ವಿತರಿಸಲಾಗಿದೆ. 412 ಅಂಗನವಾಡಿ ಕಾರ್ಯಕರ್ತೆಯರು , 17 ಮೇಲ್ವಿಚಾರಕರಿಗೆ ಕೊಡಲಾಗಿದ್ದು ಸಾಫ್ಟ್ವೇರ್‌ಗಳನ್ನು ಅದರಲ್ಲೆ ಅಳವಡಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಹಾಗೂ ಪೌಷ್ಟಿಕ ಆಹಾರ, ಗರ್ಭಿಣಿ, ಬಾಣಂತಿಯರ ಕುರಿತಾದ ಮಾಹಿತಿಗಳು ಈ ಮೂಲಕ ಅಪ್‌ಡೇಟ್ ಆಗಲಿದ್ದು ರಾಷ್ಟ್ರಮಟ್ಟದಲ್ಲಿ
ತತ್‌ಕ್ಷಣ ದಾಖಲೆ ರೂಪದಲ್ಲಿ ದೊರೆಯಲಿದೆ.
-ಶ್ವೇತಾ, ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕುಂದಾಪುರ