Advertisement

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

12:05 AM Aug 17, 2022 | Team Udayavani |

ಲೋಕಸಭೆ, ರಾಜ್ಯಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳನ್ನು ಒಟ್ಟುಗೂಡಿಸಿ ಎಲ್ಲÉ ಮಾಹಿತಿಯನ್ನು ಒಂದೆಡೆ ತರುವ ಪ್ರಯತ್ನಗಳು ಆರಂಭವಾಗಿವೆ. ಹೊಸದಾಗಿ ನಿರ್ಮಾಣವಾಗುವ ಪಾರ್ಲಿಮೆಂಟ್‌ನಲ್ಲಿ ಸಂಸದರಿಗೆ ಸ್ಮಾರ್ಟ್‌ ಡೆಸ್ಕ್ಗಳ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ ಈಗಾಗಲೇ 21 ರಾಜ್ಯಗಳು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯದೊಂದಿಗೆ ಸ್ಮಾರ್ಟ್‌ ನೆಸ್‌ಗೆ ಸಹಿ ಹಾಕಿವೆ. ಇನ್ನು ಕೆಲವೇ ದಿನಗಳು ಈ ಎಲ್ಲವೂ ಪೇಪರ್‌ಲೆಸ್‌ ಆಗಲಿವೆ!

Advertisement

ಇ ಸಂಸದ್‌
ಹಲವಾರು ವರ್ಷಗಳಿಂದ ಇಂಥದ್ದೊಂದು ಚಿಂತನೆ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಕೇಳಿಬರುತ್ತಲೇ ಇದೆ. ಈಗ ಇದಕ್ಕೊಂದು ಅಂತಿಮ ರೂಪ ನೀಡುವುದಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ದಿಲ್ಲಿಯಲ್ಲಿ ಹೊಸದಾಗಿ ಪಾರ್ಲಿಮೆಂಟ್‌ ಕಟ್ಟಡ ತಲೆಎತ್ತುತ್ತಿದ್ದು ಸದ್ಯದಲ್ಲೇ ಇದು ಪೂರ್ಣಗೊಳ್ಳಲಿದೆ. ಇಲ್ಲಿ ಕುಳಿತುಕೊಳ್ಳುವ ಲೋಕಸಭೆ ಮತ್ತು ರಾಜ್ಯ ಸಭೆ ಸದಸ್ಯರಿಗೆ ಸ್ಮಾರ್ಟ್‌ ಡೆಸ್ಕ್ಗಳ ವ್ಯವಸ್ಥೆ ಮಾಡಲಾಗುತ್ತದೆ.

ಒಂದು ದೇಶ-ಒಂದು ಅಪ್ಲಿಕೇಶನ್‌
ಇ ಸಂಸದ್‌ ಯೋಜನೆ ಕೇವಲ ದಿಲ್ಲಿ ಮಟ್ಟದಲ್ಲಿ ಅಲ್ಲದೇ ರಾಜ್ಯಗಳಿಗೂ ವಿಸ್ತರಣೆಯಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಗಳ ಸಚಿವಾಲಯ ರಾಜ್ಯಗಳ ಜತೆ ಮಾತುಕತೆ ನಡೆಸಿದೆ. ಈಗಾಗಲೇ 21 ರಾಜ್ಯಗಳು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ. ಇದಕ್ಕಾಗಿಯೇ ನ್ಯಾಶನಲ್‌ ಇ ವಿಧಾನ್‌ ಅಪ್ಲಿಕೇಶನ್‌(ನೇವಾ) ಅನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಅಪ್ಲಿಕೇಶನ್‌ ಕೂಡ ಅಂತಿಮ ಹಂತಕ್ಕೆ ತಲುಪಿದೆ.

ಏನಿದು ನೇವಾ?
ಇದು ಅತ್ಯಂತ ವಿಶಿಷ್ಟ ರೀತಿಯಲ್ಲಿ ಕೆಲಸ ಮಾಡುವ ಆ್ಯಪ್‌ ಆಗಿದೆ. ಈಗಾಗಲೇ ಕೇಂದ್ರ ಸರಕಾರದಲ್ಲಿ ಇರುವ 100ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ಇದರಲ್ಲಿ ವಿಲೀನ ಮಾಡಲಾಗುತ್ತದೆ. ಜತೆಗೆ ಎಲ್ಲ ದಾಖಲೆ ಗಳು ಈ ಅಪ್ಲಿಕೇಶನ್‌ಗಳಲ್ಲೇ ಲಭ್ಯವಾಗಲಿವೆ. ಜತೆಗೆ ದೈನಂದಿನ ಕಾರ್ಯಗಳು ಇದರಲ್ಲೇ ಅಪ್‌ಡೇಟ್‌ ಆಗಲಿದ್ದು, ಎಲ್ಲ ಸದಸ್ಯರಿಗೆ ಕೈಬೆರಳಲ್ಲೇ ಮಾಹಿತಿ ಲಭ್ಯವಾಗುತ್ತದೆ. ಹಾಗೆಯೇ ಸದಸ್ಯರು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಸ್ವಯಂಚಾಲಿತವಾಗಿ ಭಾಷಾಂತರವಾಗುವ ಸೌಲಭ್ಯವೂ ಇದರಲ್ಲಿ ಸಿಗಲಿದೆ. ಅಲ್ಲದೆ, ಸ್ವಯಂಚಾಲಿತ ಸ್ಪೀಚ್‌ ರೆಕಗ್ನಿಶನ್‌ ವ್ಯವಸ್ಥೆಯನ್ನೂ ಇದರಲ್ಲಿ ಅಳವಡಿಸಲಾಗುತ್ತದೆ. ಇದರಿಂದಾಗಿ ಪ್ರಾದೇಶಿಕ ಭಾಷೆಗಳನ್ನು ಸುಲಭವಾಗಿ ಭಾಷಾಂತರ ಮಾಡಬಹುದಾಗಿದೆ. ಅಂದರೆ ವಾಯಿಸ್‌ ಟು ಟೆಕ್ಸ್ಟ್ ಮತ್ತು ಟೆಕ್ಸ್ಟ್ ಟು ವಾಯಿಸ್‌ನ ಸೌಲಭ್ಯವೂ ಇದರಲ್ಲಿ ಇರಲಿದೆ.

ಸದ್ಯ ಎಲ್ಲೆಲ್ಲಿ ಈ ಸೌಲಭ್ಯವಿದೆ?
ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ಈ ಸೌಲಭ್ಯ ಅಳವಡಿಸಿಕೊಳ್ಳಲಾಗಿದೆ. ತೆಲಂಗಾಣ ರಾಜ್ಯವೂ ಈ ಬಗ್ಗೆ ಆಸಕ್ತಿ ತೋರಿದೆ. ಗೋವಾ 2014ರಿಂದಲೇ ಸ್ಮಾರ್ಟ್‌ನೆಸ್‌ ಆಗಿದ್ದು, ಮುಂದೆ ನೇವಾಗೆ ಸೇರುವ ಬಗ್ಗೆ ನಿರ್ಧರಿಸಿದೆ. ಮಣಿಪುರ ರಾಜ್ಯ ನೇವಾ ಅಳವಡಿಕೆಯ ಪ್ರಕ್ರಿಯೆಯಲ್ಲಿದೆ. ಅಸ್ಸಾಂ ರಾಜ್ಯದಲ್ಲಿ ಹೊಸದಾಗಿ ವಿಧಾನಸಭೆ ಕಟ್ಟಡ ತಲೆ ಎತ್ತುತ್ತಿದ್ದು, ಇದರಲ್ಲಿ ಸಂಪೂರ್ಣ ಸ್ಮಾರ್ಟ್‌ ಡೆಸ್ಕ್ ಬರಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next