Advertisement

ಬೆಳಗಾವಿ ದಕ್ಷಿಣ-ಉತ್ತರದ ಕ್ಷೇತ್ರಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಂ

03:20 PM Sep 21, 2019 | Team Udayavani |

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ 11 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ರೂಂಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ ಬೆಳಗಾವಿ ದಕ್ಷಿಣ ಮತ್ತು ಉತ್ತರದ ಕ್ಷೇತ್ರಗಳಲ್ಲಿ 8 ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂಗಳನ್ನಾಗಿ ಪರಿವರ್ತಿಸಲಾಗಿದೆ.
ಬೇಡಿಕೆಯ ಆಧಾರದ ಮೇಲೆ ಇನ್ನೂ ಮೂರು ಶಾಲೆಗಳಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ 20 ಗಣಕಯಂತ್ರಗಳು, ಪಿಠೊಪಕರಣಗಳು ಮತ್ತು ಒಂದು ಇ ಲೈಬ್ರರಿಯನ್ನು ಒದಗಿಸಲಾಗಿದೆ. ಎರಡನೇ ಹಂತದ ಕಾಮಗಾರಿಗಳು ಒಂದು ವಾರದಲ್ಲಿ ಸಂಪೂರ್ಣಗೊಳ್ಳಲಿವೆ ಎಂದು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಹಿರಿಯ ಸಾಮಾಜಿಕ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಶಾಲೆಗಳನ್ನು ವಿದ್ಯಾರ್ಥಿಗಳ ಸಂಖ್ಯಾ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಈ ಸ್ಮಾರ್ಟ ತರಗತಿ ಕೊಠಡಿಯ ಲಾಭವನ್ನು ಪಡೆಯಬೇಕು . ಈ ಸ್ಮಾರ್ಟ್ ತರಗತಿ ಕೊಠಡಿಯಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲನೇ ಹಂತದಲ್ಲಿ ಚಿಂತಾಮಣರಾವ್ ಶಾಲೆ ಶಹಾಪುರ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಡಗಾಂವ, ಕನ್ನಡ ಹಿರಿಯ ಪ್ರಾ.ಶಾಲೆ ಭಾರತನಗರ ಖಾಸಭಾಗ, ಸರ್ದಾರ ಹೆ„ಸ್ಕೂಲ ಚವಾಟಗಲ್ಲಿ, ಖಾಸಭಾಗ, ಮಹಾಂತೇಶ ನಗರ, ವಡಗಾಂವಿ, ಹಳೆ ಬೆಳಗಾವಿ ಶಾಲೆಗಳು ಸ್ಮಾರ್ಟ್ ಕ್ಲಾಸ್ರೂಂ ಗಳನ್ನು ಹೊಂದಿವೆ. ಎರಡನೇ ಹಂತದಲ್ಲಿ ವಂಟಮೂರಿ, ಉರ್ದು ಶಾಲೆ ಖಂಜರಗಲ್ಲಿ, ಸರ್ಕಾರಿ ಶಾಲೆ ವಿಶ್ವೇಶ್ವರಯ್ನಾ ನಗರ ಶಾಲೆಗಳು ಸ್ಮಾರ್ಟಕ್ಲಾಸ್ರೂಂ ಗಳನ್ನು ಹೊಂದಲಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next