Advertisement
ಅಲ್ ರಿಹ್ಲಾ ಇದು ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಬಳಕೆ ಮಾಡಲಾಗುತ್ತಿರುವ ಚೆಂಡಿನ ಹೆಸರು. ಅರಬ್ ಮೂಲದ ಪದ. ಇದರ ಅರ್ಥ “ದಿ ಜರ್ನಿ’ ಅಥವಾ “ಪರ್ಯಟನೆ’. ಇದರಲ್ಲಿನ ತ್ರಿಕೋನಾಕಾರದ ಪ್ಯಾನಲ್‌ಗಳು ಅರಬ್ ದೇಶದಲ್ಲಿ ಬಳಕೆ ಮಾಡುವ ಸಾಂಪ್ರದಾಯಿಕ ಹಡಗನ್ನು ನಡೆಸುವುದನ್ನು ಪ್ರತಿನಿಧಿಸುತ್ತವೆ.
ಈ ಅಲ್ ರಿಹ್ಲಾ ಚೆಂಡನ್ನು ಎಷ್ಟು ವೇಗದಲ್ಲಿ ಬೇಕಾದರೂ ಹೊಡೆಯುವಂತೆ ರೂಪಿಸಲಾಗಿದೆ. ಅಂದರೆ ಇದು ಬೆಳಕಿಗಿಂತಲೂ ವೇಗವಾಗಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. 92 ವರ್ಷಗಳ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಇದೇ ಮೊದಲ ಬಾರಿಗೆ ಇಂಥ ಅತ್ಯಂತ ವೇಗವರ್ಧಿತ ಚೆಂಡನ್ನು ಬಳಕೆ ಮಾಡಲಾಗುತ್ತಿದೆ ಎಂಬುದು ವಿಶೇಷ. ಸಿಟಿಆರ್-ಕೋರ್
ಬಾಲಿನೊಳಗೆ ಇರುವ ಒಂದು ನಾವೀನ್ಯ ತಿರುಳು. ಇದು ಸ್ಥಿರತೆ ಮತ್ತು ನಿಖರತೆಗೆ ಹೆಚ್ಚಿನ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಆಟಗಾರರ ವೇಗಕ್ಕೆ ತಕ್ಕಂತೆ ಸ್ಪಂದಿಸುತ್ತದೆ.
Related Articles
ಬೋಲ್ಡ್ ಮತ್ತು ವೈವಿಧ್ಯಮಯ ಬಣ್ಣಗಳೊಂದಿಗೆ ಗ್ರಾಫಿಕ್ಸ್ ಅನ್ನು ಬಾಲಿನ ಮೇಲೆ ಬಳಕೆ ಮಾಡಲಾಗಿದೆ. ಈ ಬಣ್ಣಗಳು ಕತಾರ್‌ನ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಬಾವುಟವನ್ನು ಪ್ರತಿನಿಧಿಸುತ್ತವೆ.
Advertisement
ಸೆಮಿ ಆಟೋಮೇಟೆಡ್ ಆಫ್ ಸೈಡ್ ಟೆಕ್ನಾಲಜಿ ಫಿಫಾವು 2018ರ ವಿಶ್ವಕಪ್‌ನಲ್ಲೇ ತಾಂತ್ರಿಕತೆಯನ್ನು ಬಳಕೆ ಮಾಡಿತ್ತು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವೀಡಿಯೋ ಅಸಿಸ್ಟೆಂಟ್ ರೆಫರಿಂಗ್(ವಿಎಆರ್) ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಬಾಲ್ ಮತ್ತು ಎಲ್ಲ 22 ಆಟಗಾರರ ಮೇಲೆ ನಿಗಾ ಇಡಲಿದೆ. ಕಿಕ್ ಪಾಯಿಂಟ್ ಪ್ರೀಸಿಶನ್
ಯಾವಾಗ ಮತ್ತು ಎಲ್ಲಿ ಬಾಲ್ ಅನ್ನು ಒದೆಯಲಾಯಿತು ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. 12 ಕೆಮರಾಗಳು
ಕ್ರೀಡಾಂಗಣಗಳ ಮೇಲ್ಛಾವಣಿಯಲ್ಲಿ 12 ಕೆಮರಾಗಳನ್ನು ಅಳವಡಿಸಲಾಗಿದ್ದು, ಬಾಲ್‌ನ ಚಲನೆ ಮತ್ತು ಎಲ್ಲ 22 ಆಟಗಾರರ ಮೇಲೆ ನಿಗಾ ವಹಿಸಲಾಗಿರುತ್ತದೆ. ಟ್ರ್ಯಾಕ್
ಬಾಲ್ ಯಾರ ಬಳಿ ಇದೆ? ಯಾರಿಗೆ ಹೋಯಿತು? ಯಾರು ಕಿಕ್ ಮಾಡಿದರು ಎಂಬುದರ ಟ್ರ್ಯಾಕ್ ಮಾಡಲಾಗುತ್ತದೆ. ವೀಡಿಯೋ ಆಪರೇಶನ್ ರೂಂಗೆ ಅಲರ್ಟ್ ಅನ್ನು ರವಾನೆ ಮಾಡಲಾಗುತ್ತದೆ. ನಿರ್ಧಾರವನ್ನು ರೆಫರಿಗೆ ಕಳುಹಿಸಲಾಗುತ್ತದೆ. ಬಾಲ್ ತಂತ್ರಜ್ಞಾನದ ಸಂಪರ್ಕ
ಬಾಲಿನೊಳಗಿನ ಸಸ್ಪೆನ್ಶನ್ ವ್ಯವಸ್ಥೆಯು ಜಡತ್ವದ ಅಳತೆಯನ್ನು ಗುರುತಿಸಲಿದೆ. ಇದಕ್ಕಾಗಿ ಇಲ್ಲಿ ಯೂನಿಟ್ ಮೋಶನ್ ಸೆನ್ಸರ್(ಐಎಂಯು) ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸ್ಪೀಡ್‌ಶೆಲ್
ಬಾಲಿನ ಪಾಲ್ಯುರ್ಥೇನ್(ಪಿಯು) ಸ್ಕಿನ್‌ನಲ್ಲಿ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಬರಹಗಳನ್ನು ಕಾಣಬಹುದಾಗಿದೆ. ಇದರಲ್ಲಿ ಹೊಸದಾದ 20 ಪೀಸ್ ಪ್ಯಾನಲ್ ಶೇಪ್ ಇದೆ. ಇದು ಏರೋಡೈನಾಮಿಕ್ಸ್ ಅನ್ನು ಹೆಚ್ಚಿಸಿ, ನಿಖರತೆಯನ್ನು ಸುಧಾರಿಸುತ್ತದೆ. ಆಟಗಾರರು ಯಾವುದೇ ಆ್ಯಂಗಲ್‌ನಿಂದ ಬೇಕಾದರೂ ಈ ಬಾಲನ್ನು ಚಲನೆ ಮಾಡಬಹುದು.