ಅದು ನವೆಂಬರ್‌ನ ತಿಂಗಳು ಸ್ವಲ್ಪರ ಮಟ್ಟಿಗೆನೋ ಕೊರೊನಾ ಸೋಂಕು ಕಡಿಮೆಯಾದ್ದರಿಂದ ನಮ್ಮ ಜೀವನ ಸಾಮಾನ್ಯ ಜೀವನದತ್ತ ಹೋಗುತ್ತಿತ್ತು. ಅದೇ ಸಮಯ ನಾವು ಪಿಯುಸಿ ಮುಗಿಸಿ ಪದವಿ ಕಾಲೇಜು ಆರಂಭದ ನಿರೀಕ್ಷೆಯಲ್ಲಿ ಇದ್ವಿ. 6 ತಿಂಗಳಿಂದ ಬಡಾವಣೆ ದಾಟಿ ಹೊರಗೆ ಬಾರದೇ ಲಾಕ್‌ಡೌನ್‌ನಿಂದ ಬೇಸರಗೊಂಡಿದ್ದೆವು.
ಪದವಿ ಕಾಲೇಜುಗಳಿಗೆ ಹೋಗಿ ಬೇರೆಯಾಗುವ ಮೊದಲೇ ಒಂದು ಪ್ರವಾಸ ಹೋಗಲು ತೀರ್ಮಾನ ಮಾಡಿದ್ದೆವು ಆದರೆ ಲಾಕ್‌ಡೌನ್ ಆಗಿದ್ದರಿಂದ ಅದು ಮುಗಿದ ಮೇಲೆ ಒಂದು ಕಿರು ಪ್ರವಾಸ ಹೋಗಲು ತೀರ್ಮಾನ ಮಾಡಿದೆವು. ಸಮೀಪದಲ್ಲೇ ಇದ್ದ ಆಲಿಮಟ್ಟಿಗೆ ಹೋಗುವುದಕ್ಕೆ ಸಿದ್ಧವಾಗಿ. ಅಲ್ಲಿಯೇ ಕ್ರೂéಸರ್ ಬಾಡಿಗೆ ಹೇಳಿ ಮೆನೆಗೆ ತೆರಳಿದ್ದೆವು.
ಬೆಳಗ್ಗೆ ಎದ್ದು ಬೇಗ ಬೇಗನೆ ತಯಾರಿ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಹೊರಟದ್ದಾಯಿತು. ಹಾದಿಯಲ್ಲಿ ಕೊಲ್ಹಾರದಲ್ಲಿ ಉಪಾಹಾರ ಮುಗಿಸಿ ಊಟಕ್ಕೆ ಕೊಲ್ಹಾರ ಪ್ರಸಿದ್ದ ಗಡಗೆ ಮೊಸರು ತೆಗೆದುಕೊಂಡು ಹೋದೆವು. ನಮ್ಮ ತೀರ್ಮಾನ ಬರಿ ಆಲಿಮಟ್ಟಿ ಹೋಗಿ ಬರುವುದಿತ್ತು ಆದರೆ ಹೋಗುತ್ತಾ ಬಾದಾಮಿಯ ಬನಶಂಕರಿ ತಾಯಿಯ ದರ್ಶನ ಮಾಡಿಕೊಂಡು ಹೋಗುವ ತಿರ್ಮಾನ ಮಾಡಿ ಅನಂತರ ಅಲ್ಲಿಯೇ ಇರುವ ವಿಶಿಷ್ಟ ಮೆಣಬಸ್ತಿಗೆ ಹೋಗಿ ಅಲ್ಲೊಂದಿಷ್ಟು ಫೋಟೋ ತೆಗೆಸಿಕೊಂಡು ಅನಂತರ ಬಾದಾಮಿಯಿಂದ ನೇರವಾಗಿ ಆಲಿಮಟ್ಟಿ ಹೋಗಲು ತೀರ್ಮಾನ ಮಾಡಲಾಗಿತ್ತು. ವಿಶಿಷ್ಟವೆಂದರೆ ಬಾದಾಮಿಯಿಂದ ಆಲಿಮಟ್ಟಿ ಹೋಗುವ ಹಾದಿಯಲ್ಲಿ ಇನ್ನು ಅನೇಕ ಪ್ರವಾಸಿ ತಾಣಗಳಿವೆ ಎಂದು ತಿಳಿಯಿತು. ಮಹಾಕುಟ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮದ ಹಾದಿಯಿಂದಲೇ ಹೊಗುವುದೆಂದು ತಿಳಿಯಿತು. ಹಿಂದೆ ಮುಂದೆ ಯೋಚಿಸದೆ ಅಲ್ಲಿಗೆ ಹೋಗಲು ತೀರ್ಮಾನಿಸಿದೇವು.
ಮಹಾಕೂಟದಲ್ಲಿ ಸ್ವಲ್ಪ ಸಮಯ ಕಳೆದು ಅಲ್ಲಿಯೇ ಊಟ ಮುಗಿಸಿ ಐಹೊಳೆಗೆ ಹೋದೆವು. ಮ್ಯೂಸಿಯಂ ನಮ್ಮ ಗಮನ ಸೆಳೆಯಿತು. ಅಲ್ಲಿಂದ ಪಟ್ಟದಕಲ್ಲಿಗೆ ಹೋಗಿ ನೋಡಿದಾಗ ಅಲ್ಲಿನ ವಿಶಿಷ್ಟ ಇತಿಹಾಸವೇ ನೋಡಿದಂತಾಗಿತ್ತು. ಅನಂತರ ಕೂಡಲಸಂಗಮಕ್ಕೆ ಹೋಗಿ ಕೂಡಲಸಂಗಮದೇವನ ದರ್ಶನ ತೆಗೆದುಕೊಂಡು ಹೊರಗೆ ಬರುವುದರಲ್ಲಿ ಸಮಯ 6 ಗಂಟೆಯಾಗಿತ್ತು ನಾವು ತೀರ್ಮಾನ ಮಾಡಿದ್ದು ಆಲಿಮಟ್ಟಿ ಎಂದು ನೆನಪಾಯಿತು. ಕೊನೆಗೆ ಸಾಯಂಕಾಲ ಆಲಿಮಟ್ಟಿಯ ವಿಶಿಷ್ಟ ಸಂಗೀತ ಕಾರಂಜಿ ನೋಡಿಕೊಂಡು ನಮ್ಮುರಿನ ಹಾದಿ ಹಿಡಿದೆವು. ಅದು ಒಂದು ದಿನದ ಕಿರು ಪ್ರವಾಸವೇ ಆಗಿತ್ತು ಆದರೆ ಅತ್ಯಂತ ಸಂತೋಷದಿಂದ ಆ ದಿನ ಹೇಗೆ ಕಳೆಯಿತು ಎಂದು ಗೊತ್ತಾಗಲಿಲ್ಲ.
ಪೃಥ್ವಿರಾಜ ಕುಲಕರ್ಣಿ
ಎಸ್‌ಬಿ ಕಲಾ, ಕೆಸಿಪಿ ವಿಜ್ಞಾನ, ವಿಜಯಪುರ