ಹೊಸದಿಲ್ಲಿ: ಅಂಚೆ ಇಲಾಖೆಯು ಒದಗಿಸುವ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಹೆಚ್ಚುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
Advertisement
ಕಳೆದ ಒಂದು ವರ್ಷದ ಅವಧಿಯಲ್ಲಿ ಸರಕಾರಿ ಬಾಂಡ್‌ಗಳು ಉತ್ತಮ ಲಾಭಾಂಶವನ್ನು ಗಳಿಸಿವೆ. ಸರಕಾರಿ ಬಾಂಡ್‌ಗಳ ಲಾಭಾಂಶ ಹೆಚ್ಚಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಿಸಬೇಕು ಎಂದು 2011ರಲ್ಲಿ ಗೋಪಿನಾಥ್ ಸಮಿತಿ ಶಿಫಾರಸು ಮಾಡಿದೆ.
ಇದರ ಆಧಾರದಲ್ಲಿ ಹೇಳುವುದಾದರೆ ಪಿಪಿಎಫ್ ಬಡ್ಡಿದರ ಶೇ. 7.81ಕ್ಕೆ ಹಾಗೂ ಸುಕನ್ಯಾ ಸಮೃದ್ಧಿ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿದರ ಶೇ. 8ಕ್ಕಿಂತ ಹೆಚ್ಚುವ ಸಾಧ್ಯತೆಗಳಿವೆ ಎಂದು ಈ ಮೂಲಗಳು ತಿಳಿಸಿವೆ.