Advertisement
ಜಗದ ನಾಗಾಲೋಟವ ನೋಡುತ್ತಲೇ
Related Articles
Advertisement
ಸುಂದರ ನಾಳೆಗಾಗಿ,
ನಿತ್ಯ ಮಾರ್ಧನಿಸುತ್ತವೆ,
ಹುಚ್ಚು ಹೊಂಗನುಸುಗಳು…
ಹರೆಯ ಕಳೆದು,
ನೆರೆಯು ಬಂದು,
ಜರನು ಬದುಕಿನ ಕದವ ತಟ್ಟುತ್ತಿರಲು
ಎತ್ತರದ ಕನಸುಗಳು ತತ್ತರಿಸಿ ಹೋಗಿ
ಕುಬ್ಜವಾಗಿ, ಕರಗೇ ಹೋದವು
ಕಾಲನ ಕರೆಗೆ, ಕತ್ತಲಿನ ಕೂಪದಲಿ
ಸತ್ತೇ ಹೋದವು
ಈ ಹುಚ್ಚು ಹೊಂಗನಸುಗಳು…
– ರವಿನಾಗ್ ತಾಳ್ಯ