Advertisement
ಒಣ ದಾಲ್ಚಿನ್ನಿ ಎಲೆಗಳು ಮತ್ತು ತೊಗಟೆ ಮಸಾಲೆಗಳ ರೂಪದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ದಾಲ್ಚಿನ್ನಿ ಬಳಕೆಯು ರಕ್ತವನ್ನು ಸ್ವಚ್ಛಗೊಳಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇಷ್ಟೇ ಅಲ್ಲದೆ ಮೈಗ್ರೇನ್ನಂತಹ ತಲೆನೋವಿಗೂ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ದಾಲ್ಚಿನ್ನಿ ಮೂಲಕ ಪಡೆಯಬಹುದಾಗಿದೆ.
Related Articles
Advertisement
ದಾಲ್ಚಿನ್ನಿ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಉಪಾಹಾರಕ್ಕೆ ಅರ್ಧ ಘಂಟೆಯ ಮೊದಲು ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಅದನ್ನು ಒಂದು ಕಪ್ ನಲ್ಲಿ ಹಾಕಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದನ್ನು ಕೆಲವು ದಿನಗಳ ಕಾಲ ಅಭ್ಯಾಸ ಮಾಡಿಕೊಂಡಲ್ಲಿ ಹಂತ ಹಂತವಾಗಿ ನಿಮ್ಮ ತೂಕ ಇಳಿಯಲು ಸಹಾಯ ಮಾಡುತ್ತದೆ.
ಹೃದಯದ ಸಮಸ್ಥಿತಿಗೆ ದಾಲ್ಚಿನ್ನಿ ಬಳಸಿ :
ದಾಲ್ಚಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ ಮತ್ತು ಜೇನು ಪೇಸ್ಟ್ ತಯಾರಿಸಿ ಅಕ್ಕಿ ರೊಟ್ಟಿ ಜೊತೆ ತಿನ್ನಿರಿ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಾಗೆಯೇ ಇದು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹೃದಯದ ಸಮಸ್ಯೆಗೆ ದಾಲ್ಷಿನ್ನಿ ಅತ್ಯಂತ ಪ್ರಯೋಜನಕಾರಿ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.