Advertisement

ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ವಿಡಿಯೋ ವೈರಲ್

04:15 PM Jul 16, 2022 | Team Udayavani |

ಹೊಸದಿಲ್ಲಿ: ದೇಶ ಕಾಯುವ ಯೋಧರು ದೇವರಿಗೆ ಸಮ. ಹಗಲಿರುಳು ಎನ್ನದೇ ದೇಶಕ್ಕಾಗಿ, ದೇಶದ ಜನರಿಗಾಗಿ ದುಡಿಯುವ ಇವರು ನಮ್ಮ ದೇಶದ ರಕ್ಷಕರು. ದೇಶದ ಹಿತಕ್ಕಾಗಿ ದೇಹ ಸವೆಸುವ ಇವರು ಜೀವ, ಬದುಕಿನ ಹಂಗು ತೊರೆದು ದೇಶ ಸೇವೆಯಲ್ಲಿ ನಿರತರಾಗಿರುತ್ತಾರೆ.

Advertisement

ಇಲ್ಲೊಂದು ಮಗು ನಿಂತಿದ್ದ ಯೋಧರ ಬಳಿ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದೆ. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಕಪ್ಪು ಬಣ್ಣದ ಫ್ರಾಕ್ ತೊಟ್ಟ ಮುದ್ದಾದ ಮಗು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡುತ್ತಾ ಸೈನಿಕರ ಬಳಿಗೆ ಹೋಗಿ ನಿಲ್ಲುತ್ತದೆ. ಆಗ ಅಲ್ಲಿ ಮಾತನಾಡುತ್ತಾ ನಿಂತಿದ್ದ ಸೈನಿಕರೊಬ್ಬರು ಮಗುವನ್ನು ಕಂಡಾಕ್ಷಣ ಗಲ್ಲ ಹಿಡಿದು ಮುದ್ದಿಸಿ ಮಾತನಾಡಿಸುತ್ತಾರೆ. ಸೈನಿಕರ ಮುಖವನ್ನೇ ನೋಡುತ್ತಿದ್ದ ಮಗು ಸೈನಿಕರ ಕಾಲಿಗೆ ನಮಸ್ಕರಿಸುತ್ತದೆ. ಈ ವಿಡಿಯೋ ಸಾಮಾಜಿಕ ವೇದಿಕೆ ಕೂ ನಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಟ್ರೆಂಡಿಂಗ್ ನಲ್ಲಿದೆ ‘ಮಾನ್ಸೂನ್ ರಾಗ’ ಹಾಡು: ಆ.19ಕ್ಕೆ ಚಿತ್ರ ಬಿಡುಗಡೆ

ಹರ್ಷವರ್ಧನ್ ಮುಪ್ಪವರಪು ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಇದು ಸಂಸ್ಕಾರದ ಆತ್ಮವನ್ನು ಕಲುಕುವ ಕ್ರಿಯೆ ಎಂದು ವ್ಯಾಖ್ಯಾನಿಸಿದ್ದಾರೆ.

ಇವರ ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದು, ಕಂದನಿಗೆ ಸೈನಿಕರು ದೇವರಂತೆ ಕಂಡಾಗ, ಸೈನಿಕರೂ ಆ ಕಂದನನ್ನು ದೇವರಂತೆ ಕಂಡಿರುತ್ತಾರೆ! ಮುಗ್ಧ ಪ್ರೀತಿಯ ದೇವರು ಮತ್ತು ರಕ್ಷಣೆ ನೀಡುವ ದೇವರು ಭೇಟಿಯಾದ ಕ್ಷಣ ಎಂದು ಸುದರ್ಶನ್ ಹಾರ್ನಳ್ಳಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

ಸಾಫ್ಟ್ ವೇರ್ ಇಂಜಿನಿಯರ್ ಪುನೀತ್ ಎಂಬುವವರು ಒಂದು ಮುಗ್ಧತೆ ಮತ್ತು ಇನ್ನೊಂದು ಶಕ್ತಿ ಎರಡೂ ನಮ್ಮ ರಾಷ್ಟ್ರದ ಶಕ್ತಿ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next