Advertisement

“ಗಂಗೂಬಾಯಿ ಕಾಥಿಯಾವಾಡಿ’ಗೆ 10 ಫಿಲ್ಮ್ ಪೇರ್‌ ಪ್ರಶಸ್ತಿ

07:37 PM Apr 28, 2023 | Team Udayavani |

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ “68ನೇ ಫಿಲ್ಮ್ ಪೇರ್‌ ಪ್ರಶಸ್ತಿ 2023′ ಅದ್ಧೂರಿ ಸಮಾರಂಭ ನಡೆಯಿತು. ಹಿಂದಿ ಸಿನಿಮಾ “ಗಂಗೂಬಾಯಿ ಕಾಥಿಯಾವಾಡಿ’ ಬರೋಬ್ಬರಿ 10 ಪ್ರಶಸ್ತಿಗಳನ್ನು ಬಾಚಿಕೊಂಡಿತು.

Advertisement

ಈ ಚಿತ್ರದ ನಾಯಕಿ ಅಲಿಯಾ ಭಟ್‌ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಪಡೆದರು. ಅದೇ ರೀತಿ ಈ ಚಿತ್ರವು, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಭಾಷಣೆ, ಅತ್ಯುತ್ತಮ ವಸ್ತ್ರ ವಿನ್ಯಾಸ, ಅತ್ಯುತ್ತಮ ನೃತ್ಯ ನಿರ್ದೇಶನ, ಅತ್ಯುತ್ತಮ ಸಿನಿಮ್ಯಾಟೋಗ್ರಫಿ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.

ಖ್ಯಾತ ಸಾಹಿತಿ ಹುಸೇನ್‌ ಸೈದಿ ಅವರ ಕೃತಿ “ಮಾಫಿಯಾ ಕ್ವೀನ್ಸ್‌ ಆಫ್ ಮುಂಬೈ’ ಕಥೆಯನ್ನು “ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾ ಆಗಿ ನಿರ್ಮಿಸಲಾಗಿದೆ. ಇನ್ನೊಂದೆಡೆ, ಎಲ್‌ಜಿಬಿಟಿಕ್ಯೂ ಸಮುದಾಯದ ಹಾಸ್ಯ ಸಿನಿಮಾ “ಬದಾಯಿ ದೋ’ ಚಿತ್ರದಲ್ಲಿ ತೃತೀಯಲಿಂಗಿ ಪೊಲೀಸ್‌ ಆಗಿ ನಟಿಸಿದ ರಾಜ್‌ಕುಮಾರ್‌ ರಾವ್‌ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಚಿತ್ರಕ್ಕೆ ಅತ್ಯುತ್ತಮ ಪೋಷಕ ಪಾತ್ರ (ಶೀಬಾ ಚಡ್ಡಾ), ಅತ್ಯುತ್ತಮ ಕಥೆ, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next