ಪಲ್ಲೆಕೆಲೆ: ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದ ಖುಷಿಯಲ್ಲಿರುವ ಭಾರತದ ವನಿತೆಯರು ಶುಕ್ರವಾರದಿಂದ ಏಕದಿನ ಸರಣಿ ಆರಂಭಿಸಲಿದ್ದಾರೆ. ಇದು 3 ಪಂದ್ಯಗಳ ಸರಣಿಯಾಗಿದ್ದು, ಪಲ್ಲೆಕೆಲೆಯಲ್ಲಿ ನಡೆಯಲಿದೆ.
Advertisement
ತಂಡದ ಪಿಲ್ಲರ್‌ಗಳಂತಿದ್ದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಗೈರು ಭಾರತವನ್ನು ಕಾಡುವ ಸಾಧ್ಯತೆ ಇದೆ. ಮಿಥಾಲಿ ನಿವೃತ್ತರಾದರೆ, ಜೂಲನ್ ಸ್ನಾಯು ಸೆಳೆತದಿಂದ ಈ ಸರಣಿಯಿಂದ ದೂರ ಉಳಿದಿದ್ದಾರೆ.