Advertisement

ಲಂಕಾ 246 ರನ್‌ ಜಯಭೇರಿ

10:43 PM Jul 28, 2022 | Team Udayavani |

ಗಾಲೆ: ಪಾಕಿಸ್ಥಾನವನ್ನು 246 ರನ್ನುಗಳ ಬೃಹತ್‌ ಅಂತರ ದಿಂದ ಮಗುಚಿ ದ್ವಿತೀಯ ಪಂದ್ಯ ವನ್ನು ಗೆದ್ದ ಶ್ರೀಲಂಕಾ, ಟೆಸ್ಟ್‌ ಸರಣಿಯನ್ನು 1-1 ಸಮಬಲದಲ್ಲಿ ಮುಗಿಸಿದೆ.

Advertisement

ಗೆಲುವಿಗೆ 508 ರನ್ನುಗಳ ಕಠಿನ ಸವಾಲು ಪಡೆದಿದ್ದ ಪಾಕಿಸ್ಥಾನ, ಅಂತಿಮ ದಿನದಾಟದಲ್ಲಿ 261ಕ್ಕೆ ಆಲೌಟ್‌ ಆಯಿತು. ಪ್ರಭಾತ್‌ ಜಯಸೂರ್ಯ 5, ರಮೇಶ್‌ ಮೆಂಡಿಸ್‌ 4 ವಿಕೆಟ್‌ ಉಡಾಯಿಸಿ ಲಂಕಾ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಾಕ್‌ ಪರ ನಾಯಕ ಬಾಬರ್‌ ಆಜಂ ಹೋರಾಟವೊಂದನ್ನು ನಡೆಸಿ 81 ರನ್‌ ಹೊಡೆದರು. ಧನಂಜಯ ಡಿಸಿಲ್ವ ಪಂದ್ಯಶ್ರೇಷ್ಠ, ಪ್ರಭಾತ್‌ ಜಯಸೂರ್ಯ ಸರಣಿಶ್ರೇಷ್ಠರಾಗಿ ಮೂಡಿಬಂದರು.

Advertisement

Udayavani is now on Telegram. Click here to join our channel and stay updated with the latest news.

Next