Advertisement

ದ್ವಿತೀಯ ಟೆಸ್ಟ್‌: ಶ್ರೀಲಂಕಾಕ್ಕೆ ಇನ್ನಿಂಗ್ಸ್‌  ಮುನ್ನಡೆ

11:52 PM Jul 26, 2022 | Team Udayavani |

ಗಾಲೆ: ರಮೇಶ್‌ ಮೆಂಡಿಸ್‌ ಅವರ ಅಮೋಘ ಬೌಲಿಂಗ್‌ ದಾಳಿಯಿಂದಾಗಿ ಶ್ರೀಲಂಕಾ ತಂಡವು ಪಾಕಿಸ್ಥಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಯಶಸ್ವಿಯಾಗಿದೆ.

Advertisement

ವೆ‌ುಂಡೀಸ್‌ ದಾಳಿಯಿಂದಾಗಿ ಪಾಕಿಸ್ಥಾನ ತಂಡವು 231 ರನ್ನಿಗೆ ಆಲೌಟಾಯಿತು. ಇದರಿಂದಾಗಿ ಶ್ರೀಲಂಕಾ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್ನುಗಳ ಮುನ್ನಡೆ ಸಾಧಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡವು ಮೂರನೇ ದಿನದಾಟದಲ್ಲಿ ಮಂದ ಬೆಳಕಿನಿಂದಾಗಿ ಆಟ ಬೇಗನೇ ನಿಂತಾಗ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟಿಗೆ 176 ರನ್‌ ಗಳಿಸಿದೆ. ಇದರಿಂದ ಆತಿಥೇಯ ತಂಡ ಒಟ್ಟಾರೆ ತನ್ನ ಮುನ್ನಡೆಯನ್ನು 323 ರನ್ನಿಗೆ ಹೆಚ್ಚಿಸಿಕೊಂಡಿದೆ.

ದಿಮುತ್‌ ಕರುಣರತ್ನ ಮತ್ತು ದನಂಜಯ ಡಿ’ಸಿಲ್ವ ಮುರಿಯದ ಆರನೇ ವಿಕೆಟಿಗೆ 59 ರನ್ನುಗಳ ಜತೆಯಾಟ ನೀಡಿದ್ದರಿಂದ ಲಂಕಾದ ಮುನ್ನಡೆ 300ರ ಗಡಿ ದಾಟುವಂತಾಯಿತು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಶ್ರೀಲಂಕಾ ಇನ್ನಷ್ಟು ಜಾಗ್ರತೆಯಿಂದ ಆಡಿ ಪಾಕಿಸ್ಥಾನಕ್ಕೆ ಕಠಿನ ಸವಾಲು ನೀಡಬೇಕಾದ ಅಗತ್ಯವಿದೆ.

ಇದೇ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ಥಾನ ಗೆಲುವಿಗೆ ಶ್ರೀಲಂಕಾ 342 ರನ್ನುಗಳ ಗುರಿ ನೀಡಿತ್ತು. ಅಂತಿಮ ದಿನದಾಟದಲ್ಲಿ ಪಾಕಿಸ್ಥಾನ ಭರ್ಜರಿಯಾಗಿ ಆಡಿ ನಾಲ್ಕು ವಿಕೆಟ್‌ಗಳಿಂದ ಗೆದ್ದ ಸಾಧನೆ ಮಾಡಿತ್ತು. ಇದು ಗಾಲೆಯಲ್ಲಿ ಚೇಸ್‌ನಲ್ಲಿ ಯಶಸ್ಸು ಪಡೆದ ದಾಖಲೆಯೂ ಹೌದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next