Advertisement

ವಿಶ್ವದ ಅತ್ಯುತ್ತಮ ಏರ್ಪೋರ್ಟ್ ಗಳ ಪಟ್ಟಿ ಬಿಡುಗಡೆ; ಇಲ್ಲಿದೆ ಟಾಪ್ 20 ವಿ.ನಿಲ್ದಾಣಗಳ ಪಟ್ಟಿ

04:55 PM Mar 16, 2023 | Team Udayavani |

ಲಂಡನ್: ಯುನೈಟೆಡ್ ಕಿಂಗ್ ಡಮ್ ಮೂಲದ ಸ್ಕೈಟ್ರಾಕ್ಸ್ ಸಂಸ್ಥೆಯು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿಂಗಾಪುರದ ಚಾಂಗಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಬಿರುದನ್ನು ಮರಳಿ ಪಡೆದುಕೊಂಡಿದೆ.

Advertisement

ಸಾಂಕ್ರಾಮಿಕ ಪ್ರಯಾಣದ ನಿರ್ಬಂಧಗಳ ಸಮಯದಲ್ಲಿ ಎರಡು ವರ್ಷಗಳ ಕಾಲ ಕತಾರ್‌ ನ ದೋಹಾ ಅತ್ಯುತ್ತಮ ಏರ್ಪೋರ್ಟ್ ಬಿರುದು ಪಡೆದಿತ್ತು. ಇದೀಗ ದೋಹಾ ಎರಡನೇ ಸ್ಥಾನದಲ್ಲಿದೆ.

ಸ್ಕೈಟ್ರಾಕ್ಸ್ ವಿಶ್ವ ಏರ್ಪೋರ್ಟ್ ಪ್ರಶಸ್ತಿಗಳನ್ನು ಗ್ರಾಹಕರ ಸಮೀಕ್ಷೆಯಿಂದ ನಿರ್ಧರಿಸಲಾಗುತ್ತದೆ.

“ಚಾಂಗಿ ವಿಮಾನ ನಿಲ್ದಾಣವು ಹನ್ನೆರಡನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರಿಸಲ್ಪಟ್ಟ ಗೌರವಕ್ಕೆ ಪಾತ್ರವಾಗಿದೆ” ಎಂದು ಚಾಂಗಿ ಏರ್ಪೋರ್ಟ್ ಗ್ರೂಪ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೀ ಸೆವ್ ಹಿಯಾಂಗ್ ಹೇಳಿದರು.

ಟಾಪ್ 20 ಏರ್ಪೋರ್ಟ್ ಪಟ್ಟಿ

Advertisement

1 ಸಿಂಗಾಪುರ ಚಾಂಗಿ

2 ದೋಹಾ ಹಮದ್

3 ಟೋಕಿಯೋ ಹನೆಡಾ

4 ಸಿಯೋಲ್ ಇಂಚಿಯಾನ್

5 ಪ್ಯಾರಿಸ್ ಚಾರ್ಲ್ಸ್ ಡಿ ಗಾಲೆ

6 ಇಸ್ತಾಂಬುಲ್

7 ಮ್ಯೂನಿಚ್

8 ಜ್ಯೂರಿಚ್

9 ಟೋಕಿಯೋ ನರಿಟಾ

10 ಮ್ಯಾಡ್ರಿಡ್ ಬರಜಾಸ್

11 ವಿಯೆನ್ನಾ

12 ಹೆಲ್ಸಿಂಕಿ-ವಂಟಾ

13 ರೋಮ್ ಫಿಯುಮಿಸಿನೊ

14 ಕೋಪನ್ ಹ್ಯಾಗನ್

15 ಕನ್ಸಾಯ್

16 ಸೆಂಟ್ರೇರ್ ನಗೋಯಾ

17 ದುಬೈ

18 ಸಿಯಾಟಲ್-ಟಕೋಮಾ

19 ಮೆಲ್ಬೋರ್ನ್

20 ವ್ಯಾಂಕೋವರ್

Advertisement

Udayavani is now on Telegram. Click here to join our channel and stay updated with the latest news.

Next