ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ – ಹ್ಯೂಮಾಮಿಟಿಸ್ ನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸುತ್ತಿರುವ ‘ಸ್ಕಿಲ್ ಅಪ್ ವಿಥ್ ಬಡೆಕ್ಕಿಲ ಪ್ರದೀಪ್’ ಒಂದು ದಿನದ ಕಾರ್ಯಗಾರವು ನವೆಂಬರ್ 17ರಂದು ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ.
ಇದನ್ನೂ ಓದಿ:ಕೋಲಾರ ಕಡೆ ಮುಖಮಾಡಿದ ಸಿದ್ದುಗೆ ಸಿಕ್ಕಿದ್ದೇ ಶ್ರೀಪಾದ : ಯತ್ನಾಳ್
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ಬಿಗ್ ಬಾಸ್, ಮೆಟ್ರೋ ಧ್ವನಿ ಖ್ಯಾತಿಯ ಬಡೆಕ್ಕಿಲ ಪ್ರದೀಪ್, ಚಾನ್ಸಲರ್ ಡಾ. ಸಿಎ ಎ. ರಾಘವೇಂದ್ರ ರಾವ್, ಪ್ರೊ. ಚಾನ್ಸಲರ್ ಡಾ. ಎ. ಶ್ರೀನಿವಾಸ ರಾವ್, ವೈಸ್ ಚಾನ್ಸಲರ್ ಡಾ. ಪಿ. ಎಸ್ ಐತಾಳ್, ಡೀನ್ ಡಾ. ಲವೀನಾ ಡಿಮೆಲ್ಲೋ ಸೇರಿ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕ ಪ್ರೊ. ಶ್ರೀರಾಜ್ ಎಸ್. ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.