Advertisement

ಯುವಕರೇ, ಕೌಶಲ್ಯ ತರಬೇತಿ ಪಡೆದು ಅವಕಾಶ ಪಡೆಯಿರಿ

12:35 PM Jan 17, 2022 | Team Udayavani |

ಚಾಮರಾಜನಗರ: ಕಂಪ್ಯೂಟರ್‌ ಶಿಕ್ಷಣ ಪಡೆಯದಿದ್ದರೆ ಇಂದು ವ್ಯಕ್ತಿ ಅನಕ್ಷರಸ್ಥ ಎಂಬಂತೆ ಆಗಿದೆ. ಯುವಕರು ಸಾಮಾನ್ಯ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಹೊಸ ಹೊಸತರಬೇತಿಯನ್ನು ಪಡೆದು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಜೈಹಿಂದ್‌ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್‌ ಋಗ್ವೇದಿ ತಿಳಿಸಿದರು.

Advertisement

ನಗರದ ವಾಣಿಜ್ಯ ವಿದ್ಯಾ ಸಂಸ್ಥೆಯಲ್ಲಿ ಸರಸ್ವತಿ ಪೂಜೆ ಹಾಗೂ ಪರೀಕ್ಷಾ ಪ್ರವೇಶ ಪತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಬೆರಳಚ್ಚು ತರಬೇತಿಯಿಂದ ಸರ್ಕಾರಿ ಹಾಗೂಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಏಕಾಗ್ರತೆ , ಶಬ್ದ ಸಂಪತ್ತು ಹಾಗೂ ಜ್ಞಾನದ ಮೂಲಕ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.

ನಗರದ ವಾಣಿಜ್ಯ ವಿದ್ಯಾಸಂಸ್ಥೆ ಹಲವು ದಶಕಗಳಿಂದ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆರಳಚ್ಚು ಹಾಗೂ ಶೀಘ್ರಲಿಪಿ ಶಿಕ್ಷಣ ನೀಡಿ ಅವರ ಉದ್ಯೋಗಾವಕಾಶಕ್ಕೆಕಾರಣವಾಗಿದೆ. ಸಂಸ್ಥೆಯ ಪ್ರಾಂಶುಪಾಲರಾದ ಮಹದೇವಪ್ಪಅವರು ಅನೇಕ ಅಡೆತಡೆಗಳ ಪೈಪೋಟಿಯ ನಡುವೆಯೂ ಸಂಸ್ಥೆಯನ್ನು ಬೆಳೆಸಿರುವುದು ಮೆಚ್ಚುಗೆಯ ವಿಷಯ ಎಂದರು.

ಕೌಶಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ಕುರಿತು ಮೈಸೂರಿನ ದಿನೇಶ್‌ ಕುಮಾರ್‌ ಮಾತನಾಡಿ, ಗ್ರಾಮೀಣಯುವಕರು ಕೌಶಲ್ಯ ತರಬೇತಿ ಪಡೆದು ಬದುಕು ಕಟ್ಟಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಆರ್‌.ವಿ. ಮಹಾದೇವಪ್ಪ ಮಾತನಾಡಿ,ವಿದ್ಯಾರ್ಥಿಗಳೂ ಮಾನಸಿಕ ಸಿದ್ಧತೆಯಿಂದ ಏಕಾಗ್ರತೆಯ ಮೂಲಕ ಪರೀಕ್ಷೆಯನ್ನು ಎದುರಿಸಿ, ಹೆಚ್ಚು ಅಂಕ ಪಡೆದರೆ,ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವುದು ಎಂದು ತಿಳಿಸಿದರು.

Advertisement

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌, ಅತ್ಯಂತ ಕಷ್ಟದಲ್ಲೂ ಬೆರಳಚ್ಚು ಸಂಸ್ಥೆಯನ್ನು ಉಳಿಸಿಕೊಂಡು ಹಾಗೂ ಚಾಮರಾಜನಗರದಲ್ಲಿ ಅದನ್ನು ಬೆಳೆಸುತ್ತಿರುವ ಮಹದೇವಪ್ಪನವರ ಸೇವೆ ಅನನ್ಯ ಎಂದು ತಿಳಿಸಿದರು.

ಜೆಎಸ್‌ಎಸ್‌ ಐಟಿಐ ಕಾಲೇಜಿನ ಮಹದೇವಸ್ವಾಮಿ, ಮಾಜಿ ನಗರಸಭಾ ಸದಸ್ಯೆ ಪುಷ್ಪಾ ನಾಗರತ್ನಾ, ಉಪಪ್ರಾಂಶುಪಾಲೆಲತಾ ಮಹದೇವಪ್ಪ, ಶ್ರೀನಾಥ್‌, ರಾಧಾಕೃಷ್ಣ, ರಾಜೇಂದ್ರ ಮಹದೇವ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next