ನವದೆಹಲಿ: ಕೌಶಲ (ನೈಪುಣ್ಯ) ಎನ್ನುವುದು ಸಮಯರಹಿತವಾದದ್ದು, ಇದರಿಂದಾಗಿ ನೀವು ಇನ್ನೊಬ್ಬರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗುತ್ತದೆ…ಇದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವಿಶ್ವ ಯುವ ಕೌಶಲ ದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ದೇಶದ ಜನತೆಯನ್ನು ಉದ್ದೇಶಸಿ ಮಾತನಾಡುತ್ತ ಹೇಳಿದರು.
ಸ್ಕಿಲ್ ಇಂಡಿಯಾ ಮಿಷನ್ ಯೋಜನೆ ಜಾರಿಗೊಳಿಸಿದ ಇಂದಿಗೆ ಐದು ವರ್ಷಗಳಾಗಿದ್ದು, ಈ ನಿಟ್ಟಿನಲ್ಲಿ ಕೌಶಲದ ಬಗ್ಗೆ ವಿವರಿಸಿದ ಅವರು, ಒಂದು ಬಾರಿ ನಿಮ್ಮಲ್ಲಿರುವ ಕೌಶಲತೆ ಇತರರಿಗಿಂತ ಭಿನ್ನವಾಗಿ ನಿಲ್ಲಿಸುತ್ತದೆ. ಕೌಶಲ ಎನ್ನುವುದು ನಮಗೆ ನಾವೇ ಕೊಟ್ಟು ಕೊಳ್ಳುವ ಉಡುಗೊರೆ. ಅದು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಕೌಶಲ ಸಮಯರಹಿತವಾದದ್ದು, ವಿಶಿಷ್ಟವಾದದ್ದು, ಇದು ನಿಮ್ಮನ್ನು ಇತರರಿಗಿಂತ ಭಿನ್ನವಾಗಿ ರೂಪಿಸುತ್ತದೆ ಎಂದರು.
ಇಂದಿನ ವಿಶ್ವ ಯುವ ಕೌಶಲ ದಿನದ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ನನ್ನ ಶುಭಾಶಯ ತಿಳಿಸುತ್ತೇನೆ. ಈ ಕೋವಿಡ್ 19 ವೈರಸ್ ಮಹಾಮಾರಿ ಸಂದರ್ಭದಲ್ಲಿಯೂ ನಾವು ನಮ್ಮ ಕಾರ್ಯ ಶೈಲಿಯೂ ಬದಲಾಗುತ್ತಿದೆ. ಕೆಲಸದ ವಿಧಾನವೂ ಬದಲಾಗುತ್ತಿದೆ. ಅಷ್ಟೇ ಅಲ್ಲ ತಂತ್ರಜ್ಞಾನ ಕೂಡಾ ಬದಲಾಗುತ್ತಿದೆ. ಇದರಿಂದ ಪರಿಣಾಮ ಬೀರುವಂತಾಗಿದೆ. ಆದರೆ ಯುವಕರು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೊಸ ಕೌಶಲದ ಜತೆಗೆ ಬದಲಾಗಬೇಕಾಗುತ್ತದೆ ಎಂದು ಮೋದಿ ಹೇಳಿದರು.
Related Articles
“ಉದ್ಯಮ ಹಾಗೂ ಮಾರುಕಟ್ಟೆಗಳು ಕ್ಷಿಪ್ರವಾಗಿ ಬದಲಾಗುತ್ತಿರುವ ಇಂತಹ ಸಂದರ್ಭದಲ್ಲಿ ನಾವು ಹೇಗೆ ಪ್ರಸ್ತುತರಾಗಲು ಸಾಧ್ಯ ಎಂದು ಜನರು ಕೇಳುತ್ತಿರುತ್ತಾರೆ…ಈ ಪ್ರಶ್ನೆ ಕೋವಿಡ್ 19 ವೈರಸ್ ನಂತಹ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತ ಹೋಗುತ್ತೆ ಯಾಕೆಂದರೆ ಇದಕ್ಕೆ ಸ್ಕಿಲ್, ರೀ ಸ್ಕಿಲ್ ಮತ್ತು ಅಪ್ ಸ್ಕಿಲ್ (ಕೌಶಲ, ನೂತನ ಕೌಶಲ ಮತ್ತು ಕೌಶಲಾಭಿವೃದ್ದಿ) ಮಂತ್ರವೇ ಪ್ರಸ್ತುತವಾಗಿದೆ” ಎಂದು ತಿಳಿಸಿದ್ದಾರೆ.