Advertisement

ನೂತನ ಶಿಕ್ಷಣ ನೀತಿಯಿಂದ ನೈಪುಣ್ಯತೆ: ಹಿರೇಮಠ

11:53 AM Oct 19, 2021 | Team Udayavani |

ಶಹಾಬಾದ: ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಕೌಶಲ್ಯಾಧಾರಿತ ನೈಪುಣ್ಯತೆ ಬೆಳೆಸುತ್ತದೆ ಎಂದು ಹುಣಸಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಟಿ ಹಿರೇಮಠ ಹೇಳಿದರು.

Advertisement

ಭಂಕೂರ ಗ್ರಾಮದ ಕರ್ನಾಟಕ ಪದವಿ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರತ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ತಂದ ಭಾರತದ ಪ್ರಥಮ ರಾಜ್ಯ ಕರ್ನಾಟಕವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿನ ಎಲ್ಲ ಲೋಪದೋಷಗಳನ್ನು ಸರಿಪಡಿಸಿ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ಡಾ| ಆರ್‌.ಸಿ. ನಿಂಗನಾಯಕ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣದ ಮೂಲಕ ಮಾತ್ರ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ. ಇಂದು ಎಲ್ಲ ಕ್ಷೇತ್ರಗಳಲ್ಲೂ ಪ್ರಬಲ ಸ್ಪರ್ಧೆಯಿದ್ದು, ಸ್ಪರ್ಧೆಯಲ್ಲಿ ಜಯಗಳಿಸಿದರೆ ಮಾತ್ರ ಅಸ್ತಿತ್ವ ಕಂಡುಕೊಳ್ಳಬಹುದು. ಇಂತಹ ಸ್ಪರ್ಧೆಯನ್ನು ಎದುರಿಸಲು ಗುಣಮಟ್ಟದ ಶಿಕ್ಷಣ ಅಗತ್ಯವಿದ್ದು, ನೂತನ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ ಎಂದರು.

ಕರ್ನಾಟಕ ಪದವಿ ಕಾಲೇಜಿನ ಪ್ರಾಂಶುಪಾಲ ಪಿ.ಎಸ್‌.ಕೊಕಟನೂರ್‌ ಮಾತನಾಡಿ, ಭಾರತ ದೇಶ ಅತಿ ಹೆಚ್ಚು ಯುವಕರನ್ನು ಹೊಂದಿರುವುದರಿಂದ ಅವರಿಗೆ ಕೌಶಲ್ಯಧಾರಿತ ಶಿಕ್ಷಣ ಅವಶ್ಯಕವಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗುವುದು ಎಂದು ಹೇಳಿದರು.

Advertisement

ಪ್ರಾಧ್ಯಾಪಕರಾದ ಡಿ.ವಿ.ಅಂಗಡಿ, ಶರಣಬಸಪ್ಪ ಮಾಲಿಪಾಟೀಲ,ಮಾರುತಿ ದೊಡ್ಡಮನಿ, ಮರಲಿಂಗ ಯಾದಗಿರಿ, ಹಣಮಂತ ಕುಂಬಾರ, ಶಶಿಕಾಂತ ಮಡಿವಾಳ, ರಾಜಶೇಖರ ಗುರುಮಿಠಕಲ್‌, ಕೆ.ಕೆ. ರಾಜೆ, ಶಾರದಾಬಾಯಿ ಇತರರು ಇದ್ದರು. ಸುರೇಖಾ ಮಹೇಶ ನಿರೂಪಿಸಿದರು, ಕುಮಾರಿ ಜ್ಯೋತಿ ಪ್ರಾರ್ಥಿಸಿದರು, ಕುಮಾರಿ ಐಶ್ವರ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next