ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ವಾಲ್‌ಮಾರ್ಟ್ ಸಂಸ್ಥೆಗಳಿಗೆ ಭಾರತದಲ್ಲಿ ಕೆಲಸ ನಿರ್ವಹಿಸಲು ನೀಡಲಾಗಿರುವ ಅನುಮತಿಯನ್ನು ತೆಗೆದುಹಾಕಬೇಕು. ಅವುಗಳ ಮೇಲೆ ಸಿಬಿಐ ತನಿಖೆಯಾಗಬೇಕು.
ಹೀಗೆಂದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್(ಎಸ್‌ಜೆಎಂ) ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಇತ್ತೀಚೆಗೆ ಎಸ್‌ಜೆಎಂನ ರಾಷ್ಟ್ರೀಯ ಸಮಾವೇಶ ನಡೆದಿದ್ದು, ಅದರಲ್ಲಿ ಇಂಥದ್ದೊಂದು ನಿರ್ಣಯ ಅಂಗೀಕರಿಸಲಾಗಿದೆ.
“ಹಲವು ಬ್ರ್ಯಾಂಡ್‌ಗಳ ವ್ಯವಹಾರ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ನಿಯಮಗಳಲ್ಲಿ ಬರುತ್ತದೆ. ಈ ಮೂರು ಸಂಸ್ಥೆಗಳು ಎಫ್ ಡಿಐ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿ ಸುತ್ತಿವೆ.
ಇದನ್ನೂ ಓದಿ:ಚುನಾವಣೆಯ ನೆಪ ಮಾಜಿ ಶಾಸಕರಿಂದ ಪೊಳ್ಳು ಆರೋಪ: ಕೆ.ಮಹದೇವ್
ಹಾಗಾಗಿ ಅವುಗಳನ್ನು ನಿರ್ಬಂಧಿಸುವ ಜೊತೆ, ಅವುಗಳ ಬಗ್ಗೆ ಸಿಬಿಐ ತನಿಖೆಯನ್ನೂ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಗಿದೆ.