Advertisement

ಬರೋಬ್ಬರಿ 38 ಪತ್ನಿಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ ಸಿಯೋನಾ ಚಾನಾ ನಿಧನ

03:30 AM Jun 14, 2021 | Team Udayavani |

ಐಜ್ವಾಲ್‌: ಬರೋಬ್ಬರಿ 38 ಪತ್ನಿಯರು, 89 ಮಕ್ಕಳು ಮತ್ತು 33 ಮೊಮ್ಮಕ್ಕಳನ್ನು ಹೊಂದಿದ್ದ, ಪ್ರಪಂಚದ ಅತೀ ದೊಡ್ಡ ಕುಟುಂ­ಬದ ಮುಖ್ಯಸ್ಥ ಮಿಜೋರಾಂನ ಸಿಯೋನಾ ಚಾನಾ (76) ರವಿವಾರ ನಿಧನ ಹೊಂದಿದ್ದಾರೆ.

Advertisement

ಮಧುಮೇಹ ಮತ್ತು ಅಧಿಕ ರಕ್ತ ದೊತ್ತಡದಿಂದ ಬಳಲುತ್ತಿದ್ದ ಅವರು ರಾಜಧಾನಿ ಐಜ್ವಾಲ್‌ನ ಟ್ರಿನಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಿಜೋರಾಂ ಸಿಎಂ ಜೋರಾಮಾ§ಂಗಾ, “ಪ್ರಪಂಚದ ಅತೀ ದೊಡ್ಡ ಕುಟುಂಬದ ಮುಖ್ಯಸ್ಥ ಸಿಯೋನಾ ಅವರನ್ನು ಮಿಜೋರಾಂ ಭಾರವಾದ ಹೃದಯದಿಂದ ಬೀಳ್ಕೊಡುತ್ತಿದೆ. ನೆಮ್ಮದಿಯಿಂದ ವಿಶ್ರಮಿಸಿ ಸರ್‌’ ಎಂದಿದ್ದಾರೆ.

ಬಕ್ತಾಂಗ್‌ ಟಾಂಗು° ಯಮ್‌ ಗ್ರಾಮವು ಅವರ ಬೃಹತ್‌ ಕುಟುಂಬದಿಂದಾಗಿಯೇ ರಾಜ್ಯದಲ್ಲಿ ಪ್ರವಾಸಿ ತಾಣವಾಗಿ ಹೆಸರುವಾಸಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಗ್ರಾಮದಲ್ಲಿ ಸಿಯೋನಾ ಚಾನಾಪಂಥದ ಮುಖ್ಯಸ್ಥರಾಗಿದ್ದು, ತಮ್ಮ ಪತ್ನಿ, ಮಕ್ಕಳು ಪರಿವಾರದೊಂದಿಗೆ ಒಟ್ಟಾಗಿ ನೂರು ಕೋಣೆಗಳಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ನೆಲೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next