Advertisement

ಗುಜರಾತ್‌ನಲ್ಲಿ 60ಕ್ಕೂ ಅಧಿಕ ಬ್ರಹ್ಮಿಣಿ ಹಂಸಗಳ ನಿಗೂಢ ಸಾವು

01:47 PM Feb 06, 2019 | Team Udayavani |

ವಡೋದರ : ಗುಜರಾತ್‌ನ ಭರೂಚ್‌ ಚಿಲ್ಲೆಯಲ್ಲಿ 60ಕ್ಕೂ ಹೆಚ್ಚು  ಬ್ರಹ್ಮಿಣಿ ಹಂಸಗಳು ನಿಗೂಢ ಸನ್ನಿವೇಶದಲ್ಲಿ  ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಬ್ರಹ್ಮಿಣಿ ಹಂಸಗಳ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಝಗಾದಿಯಾ ಅರಣ್ಯಾಧಿಕಾರಿ ವಿ ಝಡ್‌ ತಡವಿ ತಿಳಿಸಿದ್ದಾರೆ.

ಬ್ರಹ್ಮಿಣಿ ಹಂಸಗಳು ಮೂರು ಗ್ರಾಮಗಳ ನರ್ಮದಾ ನದೀ ಪಾತ್ರೆಯ ಉದ್ದಕ್ಕೂ ಸತ್ತು ಬಿದ್ದಿರುವುದು ಕಂಡು ಬಂದಿರುವುದಾಗಿ ತಡವಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next