Advertisement

ಸುಳ್ಯ:  ಮದರಸದಿಂದ ಮನೆಗೆ ಬರುವ ವೇಳೆ ಬೈಕ್ ಢಿಕ್ಕಿ; ಬಾಲಕಿ ಮೃತ್ಯು

11:17 AM Sep 10, 2022 | Team Udayavani |

ಸುಳ್ಯ: ಮದರಸದಿಂದ ಮನೆಗೆ ಬರಲು ರಸ್ತೆ ದಾಟುತ್ತಿದ್ದ ಬಾಲಕಿಗೆ ಬೈಕ್ ಢಿಕ್ಕಿಯಾದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಇಂದು (ಶನಿವಾರ) ಸುಳ್ಯ ಸಮೀಪದ ಅರಂಬೂರು ಎಂಬಲ್ಲಿ ಸಂಭವಿಸಿದೆ.

Advertisement

ಸುಳ್ಯದ ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ಘಟನೆ ಸಂಭವಿಸಿದೆ. ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (6 )ಮೃತ ಬಾಲಕಿ.

ರಿಫಾ ಇಂದು ಬೆಳಿಗ್ಗೆ ಮದ್ರಸದಿಂದ ಮನೆಗೆ  ಹಿಂತಿರುಗುವ ವೇಳೆ ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂದು ಢಿಕ್ಕಿ ಹೊಡೆದು ಈ ಘಟನೆ ನಡೆದಿದೆ.

ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next