Advertisement

Suspicion; ಕೂಡಂಕುಳಂ ಪರಮಾಣು ರಿಯಾಕ್ಟರ್ ಬಳಿ ಆರು ಮಂದಿ ರಷ್ಯನ್ನರು ವಶಕ್ಕೆ

10:17 AM Jul 23, 2024 | Team Udayavani |

ತಿರುನೆಲ್ವೇಲಿ: ಇಲ್ಲಿನ ಕೂಡಂಕುಳಂ ಪರಮಾಣು ರಿಯಾಕ್ಟರ್ ಪ್ರದೇಶದ ಸಮೀಪದಲ್ಲಿ ಸಂಚರಿಸುತ್ತಿದ್ದ ಆರು ಮಂದಿ ರಷ್ಯನ್ನರನ್ನು ಪೊಲೀಸರು ಅನುಮಾನದ ಮೇಲೆ ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

Advertisement

ವಲ್ಲಿಯೂರ್‌ನ ಇಬ್ಬರು ವ್ಯಕ್ತಿಗಳು ಮತ್ತು ಕೇರಳದ ತಿರುವನಂತಪುರಂನಿಂದ ಬಂದ ಕಾರು ಚಾಲಕ, ಮಹಿಳೆಯೊಂದಿಗೆ ಇದ್ದ ರಷ್ಯನ್ನರನ್ನು ಸೋಮವಾರ ಕೂಡಂಕುಳಂ ಪೊಲೀಸರು ಅನುಮಾನದ ಮೇಲೆ ವಶಕ್ಕೆ ಪಡೆದಿದ್ದಾರೆ. ಅವರನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ವಿದೇಶಿಗರು ತಮ್ಮ ಗ್ರಾಮದಲ್ಲಿ ತಿರುಗಾಡುತ್ತಿರುವುದನ್ನು ಗಮನಿಸಿದ ಇಡಿಂತಕರೈ ಗ್ರಾಮದ ಮೀನುಗಾರರು ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಂಕುಳಂ ರಷ್ಯಾದ ನೆರವಿನೊಂದಿಗೆ ನಿರ್ಮಿಸಲಾದ ಎರಡು 1,000 MWe ಪರಮಾಣು ರಿಯಾಕ್ಟರ್‌ಗಳನ್ನು ಹೊಂದಿದ್ದು, ಅದೇ ಸಂಕೀರ್ಣದಲ್ಲಿ ಇನ್ನೂ ನಾಲ್ಕು ಅಂತಹುದೇ ಘಟಕಗಳು ನಿರ್ಮಾಣವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next