Advertisement
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ಲು ಗ್ರಾಮದ ಚಿಕ್ಕ ಬಸವಯ್ಯ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿದಾಗ 1 ಕೆ.ಜಿ.50 ಗ್ರಾಂ ನಷ್ಟು ತೂಕದ ಕರಡಿ ಮಾಂಸ ಪತ್ತೆಯಾಗಿದೆ. ಈ ಮಾಂಸ ವನ್ಯಜೀವಿಯದ್ದೇ ಎಂದು ಪತ್ತೆ ಹಚ್ಚಲು ಮನೆ ಸುತ್ತ ಮುತ್ತ ಕೆಲವು ಸ್ಥಳಗಳನ್ನು ಪರಶೀಲಿಸಿದಾಗ, ಅದೇ ಗೌಜಗಲ್ಲು ಗ್ರಾಮದ ಗೋವಿಂದಪ್ಪನವರ ಜಮೀನಿನ ಬಂಡೆಯ ಮೇಲೆ ಕರಡಿಯ ದೇಹವನ್ನು ಕತ್ತರಿಸಿ ಮಾಂಸಕ್ಕಾಗಿ ಪರಿವರ್ತಿಸಿರುವ ಸ್ಥಳ ವನ್ನು ಪತ್ತೆ ಮಾಡಿ ಪರಿಶೀಲಿಸಿದಾಗ , ಕತ್ತರಿಸಿರುವ ದೇಹದ ಕೆಲವು ಭಾಗಗಳಾದ ಮುಂಗಾಲು, ನಾಲಿಗೆ, ತುಂಡಾಗಿರುವ ಬಾಲ , ಕೃತ್ಯಕ್ಕೆ ಬಳಸಿರುವ ಒಂದು ಮಚ್ಚು ಸ್ಥಳದಲ್ಲಿ ದೊರೆತಿದೆ.ಸದರಿ ಕಾಡು ಪ್ರಾಣಿಯ ದೇಹಗಳನ್ನು ಪರಶೀಲಿಸಿ ನೋಡಿ ಕರಡಿಯೇಂದು ದೃಢ ಪಡಿಸಿಕೊಂಡ ನಂತರ ಪ್ರಕರಣ ದಾಖಲಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
Related Articles
Advertisement
ಕಾರ್ಯಚರಣೆಯಲ್ಲಿ ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ.ಎಸ್.ರಮೇಶ್,ಮಧುಗಿರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ, ವಲಯ ಅರಣ್ಯಾಧಿಕಾರಿ ಸುರೇಶ್, ಹೆಚ್ ನಾಗರಾಜು, ಸಿಬ್ಬಂದಿ ಗಳಾದ ವೆಂಕಟರಾಮು, ಚಾಂದ್ ಪಾಷಾ,ರಘು.ಕೆ.ಆರ್, ಜೀಬಿ ನರಸಿಂಹಯ್ಯ,ನರಸರಾಜು ಇತರರು ಇದ್ದರು.