ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಜನರಲ್ಲಿ ಮಹಾಮಾರಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ದಾವಣಗೆರೆಯ ತರಳಬಾಳು ಬಡಾವಣೆ 37 ವರ್ಷದ ವ್ಯಕ್ತಿ (ರೋಗಿ ನಂಬರ್ 11950), 64 ವರ್ಷದ ವೃದ್ಧ (ರೋಗಿ ನಂಬರ್ 11951), 30 ವರ್ಷದ ಮಹಿಳೆ (ರೋಗಿ ನಂಬರ್ 11952), 55 ವರ್ಷದ ವ್ಯಕ್ತಿ (ರೋಗಿ ನಂಬರ್ 11953), ಹಗೇದಿಬ್ಬ ವೃತ್ತದ 68 ವರ್ಷದ ವೃದ್ಧ (ರೋಗಿ ನಂಬರ್ 11954), ಹರಿಹರದ ಗಂಗಾನಗರದ 65 ವರ್ಷದ ವೃದ್ಧ (ರೋಗಿ ನಂಬರ್ 11955)ನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೋವಿಡ್-19 ಗುಣಮುಖರಾದ ಚನ್ನಗಿರಿಯ ಕುಂಬಾರಬೀದಿಯ 31 ವರ್ಷದ ವ್ಯಕ್ತಿ( ರೋಗಿ ನಂಬರ್ 8799) , ದಾವಣಗೆರೆಯ ಆನೆಕೊಂಡದ 39 ವರ್ಷದ ವ್ಯಕ್ತಿ(ರೋಗಿ ನಂಬರ್ 8800), ಚನ್ನಗಿರಿಯ ಕುಂಬಾರ ಬೀದಿಯ 56 ವರ್ಷದ ಮಹಿಳೆ (ರೋಗಿ ನಂಬರ್8803), ಚನ್ನಗಿರಿಯ ಕುಂಬಾರ ಬೀದಿಯ 68 ವರ್ಷದ ಮಹಿಳೆ (ರೋಗಿ ನಂಬರ್8804), ಚನ್ನಗಿರಿಯ ಕುಂಬಾರ ಬೀದಿಯ 59 ವರ್ಷದ ವ್ಯಕ್ತಿ(ರೋಗಿ ನಂಬರ್ 8805), ಚನ್ನಗಿರಿಯ ಗೌಡರ ಬೀದಿಯ 47 ವರ್ಷದ ವ್ಯಕ್ತಿ(ರೋಗಿ ನಂಬರ್ 8806) ಭಾನುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ 18 ಜನರು ಸೇರಿ ಒಟ್ಟು 1,131 ಜನರು ಅವಲೋಕನದಲ್ಲಿದ್ದಾರೆ. 21 ಜನರು ಒಳಗೊಂಡಂತೆ 307 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 8 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ನಿನ್ನೆ 17 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ 787 ಜನರು ಆಸ್ಪತ್ರೆಯಲ್ಲಿದ್ದಾರೆ. ನಿನ್ನೆ 603 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. 577 ಮಾದರಿಗಳ ವರದಿ ನೆಗೆಟಿವ್ ಎಂಬುದಾಗಿ ಬಂದಿದೆ.
ಕೋವಿಡ್-19 ಪರೀಕ್ಷೆಗೆ ಸಂಬಂಧಿಸಿದಂತೆ ಕಳುಹಿಸಲಾಗಿರುವ 19,927 ಗಂಟಲು ದ್ರವ ಮಾದರಿಗಳಲ್ಲಿ 16,161 ಮಾದರಿಗಳ ವರದಿ ನೆಗೆಟಿವ್ ಆಗಿದೆ. ಇನ್ನೂ 3,471 ಮಾದರಿಗಳ ವರದಿ ಬರಬೇಕಾಗಿದೆ.
ಜಿಲ್ಲೆಯಲ್ಲಿ ಒಟ್ಟು 295 ಪ್ರಕರಣಗಳಲ್ಲಿ ಇದುವರೆಗೆ 246 ಜನರು ಬಿಡುಗಡೆಯಾಗಿದ್ದಾರೆ. ಏಳು ಜನರು ಮೃತಪಟ್ಟಿದ್ದು, 42 ಸಕ್ರಿಯ ಪ್ರಕರಣಗಳಿವೆ.