Advertisement

ಶ್ರೀಲಂಕಾ ನೌಕಾಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

06:16 PM Jul 21, 2022 | Team Udayavani |

ರಾಮೇಶ್ವರಂ: ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆಯು ಆರು ಭಾರತೀಯ ಮೀನುಗಾರರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆರು ಮಂದಿ ಬುಧವಾರ ಪಯಣ ಬೆಳೆಸಿದ್ದರು.

Advertisement

ಪಾಕ್ ಜಲಸಂಧಿ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಡಲ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ನಿನ್ನೆ ತಡರಾತ್ರಿ ಲಂಕಾ ನೌಕಾಪಡೆ ಅವರನ್ನು ಬಂಧಿಸಿದೆ ಎಂದು ತಿಳಿಸಿದ್ದಾರೆ.

ದೋಣಿಯನ್ನೂ ವಶಕ್ಕೆ ಪಡೆದು ಮೀನುಗಾರರನ್ನು ತಲೈಮನ್ನಾರ್‌ಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next