Advertisement

ಹಿಮಕುಸಿತ: ಪಾರಾಗಿದ್ದ 5 ಸೈನಿಕರ ಸಾವು

03:45 AM Jan 31, 2017 | |

ಶ್ರೀನಗರ/ಚಂಡೀಗಡ: ಜಮ್ಮು ಮತ್ತು ಕಾಶ್ಮೀರದ ಮಚಿಲ್‌ ಸೆಕ್ಚರ್‌ನಲ್ಲಿ ಹಿಮಕುಸಿತದಲ್ಲಿ ಸಿಕ್ಕಿಹಾಕಿ ರಕ್ಷಣೆಗೆ ಒಳಗಾಗಿದ್ದ ಐವರು ಯೋಧರು ಸೋಮವಾರ ಹುತಾತ್ಮರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಹುತಾತ್ಮರಾಗಿದ್ದಾರೆಂದು ರಕ್ಷಣಾ ಇಲಾಖೆ ವಕ್ತಾರ ಕ.ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ.

Advertisement

ಜ.28ರಂದು ಮಚಿಲ್‌ ಸೆಕ್ಟರ್‌ನಲ್ಲಿ ಯೋಧರು ಶಿಬಿರಗಳಿಗೆ ತೆರಳುತ್ತಿರುವ ವೇಳೆ ಹಿಮಕುಸಿತ ಉಂಟಾಗಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಅವರನ್ನು ಹೆಲಿಕಾಪ್ಟರ್‌ ಮೂಲಕ ಶ್ರೀನಗರಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಕಳೆದ ವಾರ ಕಣಿವೆ ರಾಜ್ಯದ ಗುರೇಜ್‌ ಸೆಕ್ಟರ್‌ನಲ್ಲಿ ಹಿಮಕುಸಿತದಿಂದ ಹುತಾತ್ಮರಾಗಿದ್ದ 14 ಮಂದಿ ಯೋಧರ ಮೃತ ದೇಹಗಳನ್ನೂ ಶ್ರೀನಗರಕ್ಕೆ ತರಲಾಗಿದೆ ಎಂದು ಸೇನಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ಸತತ ಹಿಮಪಾತದ ಹೊರತಾಗಿಯೂ ಸೇನಾ ಸಿಬ್ಬಂದಿ ಗುರೇಜ್‌ ಮತ್ತು ಮಚಿಲ್‌ ಸೆಕ್ಟರ್‌ಗಳಲ್ಲಿ ಶೋಧ ಕಾರ್ಯ ನಡೆಸಿ ಯೋಧರ ಮೃತದೇಹ ಪತ್ತೆ ಹಚ್ಚಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರ ಕ.ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ. ಈ ನಡುವೆ ಮತ್ತೆ ಹಿಮಾಚಲ ಪ್ರದೇಶ, ಕಾಶ್ಮೀರದಲ್ಲಿ  ಹಿಮಕುಸಿತವಾಗಲಿದೆ ಎಂದು ಚಂಡೀಗಡದ ಸಂಸ್ಥೆಯೊಂದು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next