Advertisement

ಉಡುಪಿಗೂ ಬಡಿಯಿತೂ ಕೋವಿಡ್ ಸಿಡಿಲು: ಐದು ಜನರಿಗೆ ಕೋವಿಡ್ ಸೋಂಕು ದೃಢ

08:30 AM May 16, 2020 | keerthan |

ಉಡುಪಿ: ಕಳೆದೊಂದು ತಿಂಗಳಿನಿಂದ ಯಾವುದೇ ಕೋವಿಡ್-19 ಸೋಂಕು ಪ್ರಕರಣವಿಲ್ಲದೆ ನಿರಾತಂಕದಲ್ಲಿದ್ದ ಉಡುಪಿ ಜಿಲ್ಲೆಗೆ ಇಂದು ಕೋವಿಡ್ ಸಿಡಿಲು ಬಡಿದಿದೆ. ಕಾರಣ ಇಂದು ಒಂದೇ ದಿನ ಐದು ಜನರಿಗೆ ಸೋಂಕು ದೃಢವಾಗಿದೆ.

Advertisement

ದುಬೈನಿಂದ ಮೇ 15ರಂದು ಆಗಮಿಸಿದ ಪೈಕಿ  ಉಡುಪಿ ಜಿಲ್ಲೆಯ ಆರು ಮಂದಿಯಲ್ಲಿ ಕೋವಿಡ್-19 ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನೊಬ್ಬರಿಗೂ ಸೋಂಕು ಶಂಕೆ ವ್ಯಕ್ತವಾಗಿದೆ.

ಕೋವಿಡ್-19 ಕಾರಣಕ್ಕಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರನ್ನುಮರಳಿ ಭಾರತಕ್ಕೆ ತರುವ ಕಾರ್ಯಾಚರಣೆಯಡಿ 176 ಮಂದಿ ಮಂಗಳವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣದಲ್ಲಿ ಬಂದಿಳಿದಿದ್ದರು.

ಈ ಪೈಕಿ ಉಡುಪಿ ಜಿಲ್ಲೆಗೆ ಸೇರಿದ 49 ಮಂದಿಯನ್ನು ಜಿಲ್ಲೆಯ ಹೊಟೇಲ್‌ ನಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಇವರ ಗಂಟಲದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.ಅದರ ವರದಿ ಇಂದು ಬಂದಿದೆ. ಈ ಹಿನ್ನಲೆಯಲ್ಲಿ ಐದು ಮಂದಿಯನ್ನು ಅವರು ಉಳಿದುಕೊಂಡಿರುವ ಹೊಟೇಲ್‌ನಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next