ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ ಅಖಂಡ ಶಿವನಾಮ ಸ್ಮರಣೆ ಸಪ್ತಾಹ ಅ. 28ರಿಂದ ಆರಂಭವಾಗಲಿದ್ದು, ನ. 5ರಂದು ಮುಕ್ತಾಯವಾಗಲಿದೆ. 28ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ನಿರ್ಮಾಣವಾಗಿರುವ ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನವನ್ನು ಶಾಸಕ ಸಿ.ಎಸ್. ಶಿವಳ್ಳಿ ಉದ್ಘಾಟಿಸುವರು.
ಹುಬ್ಬಳ್ಳಿಯ ನಾಸಿಕ ಶರಣಪ್ಪನ ಮಠದ ವಾಸುದೇವಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು. ನಿವೃತ್ತ ಡಿಐಜಿ ಡಾ|ಎಚ್.ಎಫ್. ನಾಯ್ಕರ್, ರಾಜೀವಗಾಂ ಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ಡಾ| ಕೆ.ಎಸ್. ಶ್ರೀಪ್ರಕಾಶ, ರಂಗಾಯಣ ಆಡಳಿತಾಧಿಕಾರಿ ಬಸವರಾಜ ಹೂಗಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಕೆ. ರಂಗಣ್ಣವರ್,
-ಜಿಲ್ಲಾ ವಾರ್ತಾರ್ಧಿಕಾರಿ ಮಂಜುನಾಥ ಡೊಳ್ಳಿನ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎ. ವಸಂತ, ಜಿಪಂ ಸದಸ್ಯೆ ಜ್ಯೋತಿ ಬೆಂತೂರ, ತಾಪಂ ಸದಸ್ಯ ಶಿವಲಿಂಗಪ್ಪ ವಡಕಣ್ಣವರ, ಗುಡಗೇರಿ ಪಿಎಸ್‌ಐ ನವೀನ ಜಕ್ಕಲಿ ಪಾಲ್ಗೊಳ್ಳುವರು.
ಸುಳ್ಳದ ರಮಾನಂದ ಸ್ವಾಮೀಜಿ, ಅರಕೇರಿಯ ಮಾಧವಾನಂದ ಸ್ವಾಮೀಜಿ, ಚಿಕ್ಕೂರಿನ ಅದ್ವೈತಾನಂದರು, ಸಂಶಿಯ ನಿರ್ಗುಣಾನಂದರು, ಕಂಚಿನಹಳ್ಳಿ ವಿಠಲ ಮಹಾರಾಜರು, ವಿಜಯಪುರ ಸಿದ್ಧರಾಮೇಶ್ವರ ಶ್ರೀಗಳು, ಬಸವಾನಂದರು, ಸವಟಗಿಯ ನಿಂಗಯ್ಯ ಸ್ವಾಮೀಜಿ, ಹೆಬ್ಬಳ್ಳಿಯ ಬಸಮ್ಮ ತಾಯಿ, ಧಾರವಾಡದ ಚಂದ್ರಶೇಖರ ಸ್ವಾಮಿಗಳು, ಕೊತಬಾಳ ಕುರಹಟ್ಟಿಯ ಸಕ್ರಪ್ಪ ಶಾಸ್ತ್ರಿಗಳು ಪ್ರತಿದಿನ ಸಂಜೆ ಬ್ರಹ್ಮಜ್ಞಾನ ಉಪದೇಶ, ಕೀರ್ತನೆ ನಡೆಸುವರು.
ಗುರುನಾಥ ಸಿದ್ರಾಮಣ್ಣವರ, ನಾರಾಯಣಗೌಡ ಪಾಟೀಲ ಹಾಗೂ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಸದಸ್ಯರಿಂದ ಸಂಗೀತ ಹಾಗೂ ಭಜನೆ ಜರುಗಲಿವೆ. ನ. 5 ರಂದು ಸಂಜೆ 4 ಗಂಟೆಗೆ ತಾತ್ವಿಕ ತೇರಿನ ಉತ್ಸವ ನಡೆಯಲಿದೆ.