Advertisement

ಶಿವಕುಮಾರಸ್ವಾಮಿಗಳ ಜನ್ಮದಿನ ಸಂತರ ದಿನವಾಗಲಿ: ರಂಜನ್‌ 

03:03 PM Mar 10, 2017 | Team Udayavani |

ಸೋಮವಾರಪೇಟೆ: ನಡೆದಾಡುವ ದೇವರೆಂದೇ ಬಿಂಬಿತರಾಗಿರುವ ಡಾ| ಶಿವಕುಮಾರ ಸ್ವಾಮಿಗಳ ಜನ್ಮದಿನವನ್ನು ಸಂತರ ದಿನವನ್ನಾಗಿ ಆಚರಿಸುವಂತಾಗಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಸಿದ್ಧಗಂಗಾ ಮಠಾಧೀಶರಾದ ಡಾ| ಶಿವಕುಮಾರ ಸ್ವಾಮಿಗಳ 110ನೇ ಜನ್ಮದಿನೋತ್ಸವದ ಅಂಗವಾಗಿ ಸೋಮವಾರಪೇಟೆಗೆ ಆಗಮಿಸಿದ ಶ್ರೀಗಳ ಶೋಭಾ ಯಾತ್ರೆ ರಥವನ್ನು ಆನೆಕೆರೆ ಬಳಿ ಯಲ್ಲಿ ಸ್ವಾಗತಿಸಿಕೊಂಡ ಅನಂತರ ಶಾಸಕರು ಮಾತನಾಡಿದರು.
ಶಿವಕುಮಾರಸ್ವಾಮಿಗಳು ಈ ನಾಡು ಕಂಡಂತಹ ಅಪೂರ್ವ ಸಂತರು. ಇವರು ಈ ರಾಜ್ಯದಲ್ಲಿ ಜನಿಸಿದ್ದು ನಮ್ಮ ಪುಣ್ಯವೆಂದರು. ಇಂತಹ ಮಹಾನ್‌ ವ್ಯಕ್ತಿಗಳು ಜನಿಸಿದ ಎಪ್ರಿಲ್‌ 1ನ್ನು ಸಂತರ ದಿನ ದಿನವನ್ನಾಗಿ ಆಚರಿಸಬೇಕಾಗಿದೆ ಎಂದರು. 

ನಾವು ಕಣ್ಣಿಗೆ ಕಾಣದಂತಹ ದೇವರನ್ನು ಪೂಜಿಸುತ್ತೇವೆ, ಆರಾಧಿಸುತ್ತೇವೆ. ಆದರೆ ಶಿವಕುಮಾರ ಸ್ವಾಮಿಗಳು ಕಣ್ಣೆದುರಿನ ನಡೆದಾಡುವ ದೇವರು, ಕಾಯಕಯೋಗಿಗಳು. ಅಂತಹ ವ್ಯಕ್ತಿಗಳು ಇನ್ನೂ ನೂರಾರು ಕಾಲ ಚೆನ್ನಾಗಿರಲಿ ಎಂದರು.

ಕೊಡ್ಲಿಪೇಟೆ ಕಿರುಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮಿ ಮಾತನಾಡಿ, ಪರಮಪೂಜ್ಯ ಶ್ರೀ ಗಳು 110ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಅವರು, ದಣಿವರಿಯದ ಜೀವಿಗಳು, ಮಹಾನ್‌ ಸಾಧಕರು. ಇವರ ಕೃಪಾಶೀರ್ವಾದದಿಂದ ಸಿದ್ಧಗಂಗಾ ಮಠದಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ, ನಿತ್ಯ ದಾಸೋಹ ನಡೆಯುತ್ತಿದೆ. ಅವರ ಕಾಯಕಕ್ಕೆ ಎಣೆಯೆ ಇಲ್ಲ. ಇಂತಹ ಸಂತರು ಈ ದೇಶಕ್ಕೆ ಮಾರ್ಗದರ್ಶಕರು ಎಂದು ಬಣ್ಣಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ಮಹೇಶ್‌ ಮಾತನಾಡಿ, ಪೂಜ್ಯ ಸಿದ್ಧಗಂಗಾ ಶ್ರೀಗಳನ್ನು ಪಡೆದ ನಾವು ಹಾಗೂ ಈ ನಾಡು ಧನ್ಯರು. ಶಿವಕುಮಾರಸ್ವಾಮೀಜಿಗಳ 110ನೇ ಜನ್ಮದಿನಾಚರಣೆ ಆಂಗವಾಗಿ ಶ್ರೀಗಳ ಮೂರ್ತಿ ಹಾಗೂ ಮಠದ ಇತಿಹಾಸ ಹೊತ್ತ ರಥ 12 ಜಿಲ್ಲೆಗಳಲ್ಲಿ ಸಂಚರಿಸಲಿದ್ದು, ಇದೀಗ ಕೊಡಗು ಜಿಲ್ಲೆಗೆ ಬಂದಿದೆ. ಭಕ್ತರು ಧನ್ಯರಾಗಿದ್ದಾರೆ. ಶ್ರೀಗಳಿಗೆ ಕೇಂದ್ರ ಸರಕಾರ ಈ ಬಾರಿಯಾದರೂ ಭಾರತರತ್ನ ನೀಡುವಂತಾಗಲಿ ಎಂದು ಮನವಿ ಮಾಡಿದರು.

ಶ್ರೀಗಳ ರಥಕ್ಕೆ ಪಟ್ಟಣದ ವಿದ್ಯಾಗಣಪತಿ ದೇವಾ ಲಯ, ಸೋಮೇಶ್ವರ ದೇವಾಲಯ ಹಾಗೂ ಬಸವೇ ಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಅಂಬೇಡ್ಕರ್‌ ಪ್ರತಿಮೆಯ ಬಳಿ ರಥವನ್ನು ಬೀಳ್ಕೊಡಲಾಯಿತು.

Advertisement

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್‌, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್‌, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯೆ ತಂಗಮ್ಮ, ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಬಿ.ಡಿ. ಮಂಜುನಾಥ್‌, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯೆ ಸುಶ್ಮಾ, ಚೌಡ್ಲು ಗ್ರಾ.ಪಂ. ಸದಸ್ಯೆ ಮಂಜುಳಾ ಸುಬ್ರಮಣಿ, ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ತಾಲೂಕು ಅಧ್ಯಕ್ಷ ಸಿ.ವಿ. ವಿಶ್ವನಾಥ್‌, ಮಹಿಳಾ ಘಟಕದ ಅಧ್ಯಕ್ಷೆ ಉಷಾ ತೇಜಸ್ವಿ, ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್‌, ಜೆಡಿಎಸ್‌ ರಾಜ್ಯ ಸಮಿತಿ ಸದಸ್ಯ ಭರತ್‌ಕುಮಾರ್‌, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್‌, ಬ್ರಾಹ್ಮಣ ಸಮಾಜದ ಅಧ್ಯಕ್ಷ ಸೋಮೇಶ್‌ ಹಾಗೂ ಸದಸ್ಯರುಗಳು, ಧರ್ಮ ಜಾಗರಣಾ ವೇದಿಕೆ ಅಧ್ಯಕ್ಷ ಸಿ.ಪಿ. ಗೋಪಾಲ್‌ ಹಾಗೂ ಸದಸ್ಯರು, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಉಮೇಶ್‌, ಹಿಂದು ಮಲಯಾಳಿ ಸಂಘದ ಅಧ್ಯಕ್ಷ ಪಿ.ಡಿ. ಪ್ರಕಾಶ್‌, ಕಸಾಪ ತಾಲೂಕು ಅಧ್ಯಕ್ಷ ಜವರಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್‌, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುರೇಶ್‌ ಶೆಟ್ಟಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next