ನವದೆಹಲಿ: ಕೋವಿಡ್ 19 ಎರಡನೇ ಅಲೆ ಹೆಚ್ಚಳವಾಗುತ್ತಿರುವುದರ ನಡುವೆ ಆಕ್ಸಿನ್, ಡ್ರಗ್ಸ್ ಮತ್ತು ಲಸಿಕೆ ಸರಬರಾಜಿನ ಕೊರತೆಯ ಹಿನ್ನೆಲೆಯಲ್ಲಿ ನೆರವು ನೀಡುವ ಎಲ್ಲಾ ದೇಶಗಳ ನಿರ್ಧಾರವನ್ನು ಸ್ವಾಗತಿಸುವುದಾಗಿ ಭಾರತ ಸರ್ಕಾರ ಗುರುವಾರ(ಏ.29) ತಿಳಿಸಿದೆ.
ಇದನ್ನೂ ಓದಿ:ನಿಮ್ಮ ತಿಕ್ಕಲುತನವನ್ನು ದೇಶದ ಜನತೆ ಎಂದಿಗೂ ಕ್ಷಮಿಸರು: ಸರ್ಕಾರದ ವಿರುದ್ಧ ಎಚ್ ಡಿಕೆ ಟೀಕೆ
ದೇಶದಲ್ಲಿನ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಹೇಳಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರೀಂಗ್ಲಾ, ಕೋವಿಡ್ ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ 40ಕ್ಕೂ ಹೆಚ್ಚು ದೇಶಗಳು ನೆರವು ನೀಡಲು ಮುಂದಾಗಿವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಭಾರತವು ಈ ಹಲವು ದೇಶಗಳಿಗೆ ಸಹಾಯ ಮಾಡಿತ್ತು, ಇದೀಗ ಬಿಕ್ಕಟ್ಟಿನ ಸಂದರ್ಭದಲ್ಲಿ ಆ ದೇಶಗಳು ಭಾರತಕ್ಕೆ ನೆರವನ್ನು ನೀಡುತ್ತಿರುವುದಾಗಿ ಹರ್ಷ ವರ್ಧನ್ ಹೇಳಿದರು.
ಇದೊಂದು ತುರ್ತು ಸ್ಥಿತಿಯಾಗಿದೆ, ನಾವು ಈ ಸಂದರ್ಭದಲ್ಲಿ ಆಕ್ಸಿಜನ್, ಲಸಿಕೆ ಸೇರಿದಂತೆ ಪ್ರಮುಖ ಅಗತ್ಯ ವಸ್ತುಗಳ ಸಂಗ್ರಹಕ್ಕಾಗಿ ಆದ್ಯತೆ ನೀಡಬೇಕಾಗಿದೆ. ಹೀಗಾಗಿ ಹಲವಾರು ದೇಶಗಳು ಸ್ವಯಂ ಆಗಿ ನೆರವು ನೀಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.