Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
ಸಂವಿಧಾನ ವಿಚಾರ: ಕಾಂಗ್ರೆಸ್ ವಿರುದ್ಧ ಸಚಿವೆ ನಿರ್ಮಲಾ ಕಟು ಟೀಕೆ
Team Udayavani, Dec 16, 2024, 4:08 PM IST
ನವದೆಹಲಿ: ಸಂವಿಧಾನವನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಕಾಂಗ್ರೆಸ್ ಈವರೆಗೆ ಮಾಡಿರುವ ಹಲವಾರು ತಿದ್ದುಪಡಿಗಳೇ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ1949ರಲ್ಲೇ ನೆಹರು ವಿರೋಧಿ ಧೋರಣೆ ಧಿಕ್ಕರಿಸಿದ್ದ ಮಜ್ ರೂಹ್ ಸುಲ್ತಾನ್ ಪುರಿ ಮತ್ತು ಬಲ್ ರಾಜ್ ಸಾಹ್ನಿ ಅವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಡಿ.16) ವಾಗ್ದಾಳಿ ನಡೆಸಿದರು.
ರಾಜ್ಯ ಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ತಿರುಗೇಟು ನೀಡಿದರು. ವಾಕ್ ಸ್ವಾತಂತ್ರ್ಯ ಮತ್ತು ಟೀಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿತ್ತು ಎಂದು ಗುಡುಗಿದರು.
1949ರಲ್ಲಿ ಜವಾಹರಲಾಲ್ ನೆಹರು ವಿರುದ್ಧ ಟೀಕಿಸಿ ಮಜ್ ರೂಹ್ ಪದ್ಯ ಬರೆದಿದ್ದರು. ಆದರೆ ಕ್ಷಮಾಪಣೆ ಕೇಳಲು ಮಜ್ ರೂಹ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಹೋರಾಟಗಾರ ಮಜ್ ರೂಹ್ ಮತ್ತು ಬಲ್ ರಾಜ್ ಸಾಹ್ನಿ ಅವರನ್ನು ಜೈಲಿಗೆ ಹಾಕಲಾಗಿತ್ತು ಎಂದು ಸೀತಾರಾಮನ್ ಹಳೆಯ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಗೆ ಚಾಟಿ ಬೀಸಿದರು.
ದೇಶದ ಅತೀ ಹಳೆಯ ಪಕ್ಷವಾದ ಕಾಂಗ್ರೆಸ್ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದಾಖಲೆ ಪ್ರಮಾಣದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. 1951ರಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿ ಮಾಡಿತ್ತು.
ಆದರೆ ಇಂದು ಮುಕ್ತ ಅಭಿಪ್ರಾಯ ಹಂಚಿಕೊಳ್ಳುವ ವಿಚಾರದಲ್ಲಿ ಭಾರತ ಹೆಮ್ಮೆಪಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಳೆದ ವಾರ ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಿದ್ದು, ಇದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಅಲ್ಲ, ಅದರ ಬದಲಾಗಿ ಕುಟುಂಬ ರಾಜಕಾರಣ ಬಲಿಷ್ಠಗೊಳಿಸುವ ಉದ್ದೇಶ ಹೊಂದಿತ್ತು ಎಂದು ವಾಗ್ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್ ಒಪ್ಪಿಗೆ
PM Modi: ಏಕ ಚುನಾವಣೆ ಕುರಿತ ಚರ್ಚೆಯಲ್ಲಿ ಯುವಜನತೆ ಪಾಲ್ಗೊಳ್ಳಲಿ
Wedding: ಫೆ.7ರಂದು ಗೌತಮ್ ಅದಾನಿ ಪುತ್ರ ಜೀತ್ ಸರಳ ವಿವಾಹ
Wayanad: ಮಹಿಳೆಕೊಂದಿದ್ದ ಹುಲಿ ಸಾವು: ಹೊಟ್ಟೆಯೊಳಗೆ ಸಿಕ್ತು ಕಿವಿಯೋಲೆ, ಬಟ್ಟೆ!
Delhi Elections: ದಿಲ್ಲಿಗೆ ಈಗ ಕೇಜ್ರಿವಾಲ್ ಕಿ ಗ್ಯಾರಂಟಿ: 15 ಆಶ್ವಾಸನೆ
MUST WATCH
ಹೊಸ ಸೇರ್ಪಡೆ
ಆತ್ಮಹ*ತ್ಯೆ ಮಾಡಿಕೊಂಡ ವ್ಯಕ್ತಿಯ ವೀರ್ಯ ಸಂಗ್ರಹಕ್ಕೆ ದೆಹಲಿ ಹೈಕೋರ್ಟ್ ಒಪ್ಪಿಗೆ
PM Modi: ಏಕ ಚುನಾವಣೆ ಕುರಿತ ಚರ್ಚೆಯಲ್ಲಿ ಯುವಜನತೆ ಪಾಲ್ಗೊಳ್ಳಲಿ
Wedding: ಫೆ.7ರಂದು ಗೌತಮ್ ಅದಾನಿ ಪುತ್ರ ಜೀತ್ ಸರಳ ವಿವಾಹ
Wayanad: ಮಹಿಳೆಕೊಂದಿದ್ದ ಹುಲಿ ಸಾವು: ಹೊಟ್ಟೆಯೊಳಗೆ ಸಿಕ್ತು ಕಿವಿಯೋಲೆ, ಬಟ್ಟೆ!
Delhi Elections: ದಿಲ್ಲಿಗೆ ಈಗ ಕೇಜ್ರಿವಾಲ್ ಕಿ ಗ್ಯಾರಂಟಿ: 15 ಆಶ್ವಾಸನೆ