ಪೆರ್ಮುದೆ: “ಕಲೆಗೆ ಬೆಲೆ ಬರುವುದು ಕಲಾವಿದನಿಂದ. ಅಂತಹ ಕಲಾವಿದನಿಗೆ ಮೌಲ್ಯ ತುಂಬುವ ಕೆಲಸ ಕಲಾಭಿಮಾನಿಗಳಿಂದ ಆಗಬೇಕು. ಅಪತ್ರಿಮ ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯ ನಿರ್ವಿಘ್ನವಾಗಿ ನೆರವೇರಲಿ’ ಎಂದು ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ ಹೇಳಿದರು.
ಅವರು 2018ರಲ್ಲಿ ನಡೆಯುವ ಸೀತಾರಾಮ ಕುಮಾರ್ ಕಟೀಲು ಯಕ್ಷ ರಂಗದಲ್ಲಿ ಗೆಜ್ಜೆ ಕಟ್ಟಿ 50ನೇ ವರ್ಷ ಸಂಭ್ರಮ “ನೂಪುರ ಸ್ವರ್ಣ ಸಂಭ್ರಮ-2018′ ಪ್ರಯುಕ್ತ ಪೆರ್ಮುದೆ ಕನ್ನಿಕಾ ನಿಲಯದಲ್ಲಿ ನಡೆದ ಅಭಿನಂದನ ಸಮಿತಿ ರಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಕೃಷ್ಣರಾಜ ಅಡ್ಯಂತಾಯ ಮಾತನಾಡಿ, ಅದ್ವಿತೀಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಅಭಿನಂದಿಸುವುದು ನಮ್ಮೆಲ್ಲರ ಭಾಗ್ಯ. ಈ ಸಂದರ್ಭದಲ್ಲಿ ಕಲಾವಿದನ ಬದುಕನ್ನು ಗಟ್ಟಿಗೊಳಿಸುವ ಕಾರ್ಯವೂ ನಡೆದು ಅರ್ಥಪೂರ್ಣವಾಗಬೇಕು ಎಂದರು.
ಶಾಂತಾರಾಮ ಕುಡ್ವ ಮೂಡಬಿದಿರೆ, ಭುಜಂಗ ಶೆಟ್ಟಿ ಪೆರ್ಮುದೆ, ಯಾದವ ಕೋಟ್ಯಾನ್, ಮನೋಹರ ಕುಮಾರ್, ದಯಾನಂದ ಕತ್ತಲ್‌ಸಾರ್, ಗೋಪಾಲಕೃಷ್ಣ ಕೆ., ಸುಕುಮಾರ್ ಸಾಲ್ಯಾನ್, ಸೀತಾರಾಮ ಕುಮಾರ್ ಕಟೀಲು ಮುಂತಾದವರು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಶ್ವನಾಥ ಪೂಜಾರಿ ರೆಂಜಾಳ ಮತ್ತು ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಕುಮಾರ್ ಕಟೀಲು ವಂದಿಸಿದರು.