Advertisement

Tirupati ಲಡ್ಡಿಗೆ ತುಪ್ಪ ಖರೀದಿ ಪ್ರಕ್ರಿಯೆ ತನಿಖೆಗೆ ಎಸ್‌ಐಟಿ: ಆಂಧ್ರ ಮುಖ್ಯಮಂತ್ರಿ

11:53 PM Sep 22, 2024 | Team Udayavani |

ಅಮರಾವತಿ: ತಿರುಪತಿ ಲಡ್ಡುಗೆ ಬಳಸುವ ತುಪ್ಪದ ಶುದ್ಧತೆ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾನುವಾರ ಘೋಷಿಸಿದ್ದಾರೆ.

Advertisement

ಜಗನ್‌ ರೆಡ್ಡಿ ಸರ್ಕಾರದ ಅವಧಿಯಲ್ಲಿ ತುಪ್ಪ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಉಲ್ಲಂಘಿ ಸಲಾಗಿದೆ. ಜತೆಗೆ ಟಿಟಿಡಿ ಮಂಡಳಿಯ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

ಹಿಂದೂ ನಿಯಮಗಳಲ್ಲಿ ನಂಬಿಕೆ ಇಲ್ಲದವರನ್ನು ಮಂಡಳಿಗೆ ನೇಮಕ ಮಾಡಲಾಗಿತ್ತು. ಜಗನ್‌ ಸರ್ಕಾರದ ಅವಧಿಯಲ್ಲಿ ಟಿಟಿಡಿಗೆ ನೇಮಕ ಮಾಡುವುದು ಒಂದು ದಂಧೆಯಾಗಿತ್ತು ಎಂದು ದೂರಿದ್ದಾರೆ.
ಐ.ಜಿ. ಮಟ್ಟದ ಅಧಿಕಾರಿ ಎಸ್‌ಐಟಿಯ ನೇತೃತ್ವ ವಹಿಸಲಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.

ಎಸ್‌ಐಟಿ ತನಿಖೆಗಾಗಿ ಸುಪ್ರೀಂನಲ್ಲಿ ಪಿಐಎಲ್‌: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಲಾಗಿದೆ.

ದೇಗುಲಗಳಿಗೆ ಸರ್ಕಾರಿ ಆಡಳಿತ ಬೇಡ: ಸದ್ಗುರು
ತಿರುಪತಿ ಲಡ್ಡು ಪ್ರಸಾದದಲ್ಲಿ ಬೀಫ್ನ ಅಂಶ ಬಳಕೆ ಮಾಡಲಾಗಿದೆ ಎಂಬ ವಿಚಾರ ಅತ್ಯಂತ ಅಸಹ್ಯಕರವಾಗಿದೆ ಎಂದು ಸದ್ಗುರು ವಾಸು ದೇವ್‌ ಹೇಳಿದ್ದಾರೆ. ದೇಗುಲಗಳ ಆಡಳಿತ ವನ್ನು ಭಕ್ತರು ನಿರ್ವಹಿಸಬೇಕು. ಸರ್ಕಾರ ಅಲ್ಲ. ಎಲ್ಲಿ ಭಕ್ತಿ ಇಲ್ಲವೇ ಅಲ್ಲಿ ಪಾವಿತ್ರ್ಯತೆಯನ್ನು ನಿರಿಕ್ಷಿಸು ವುದೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next