Advertisement

Prajwal ಪತ್ತೆಗೆ ಎಸ್‌ಐಟಿ ತಂಡ ವಿದೇಶಕ್ಕೆ ಯಾನ?8 ಅಧಿಕಾರಿಗಳ ತಂಡ ಪ್ರಯಾಣ ಸಾಧ್ಯತೆ

12:13 AM May 08, 2024 | Team Udayavani |

ಬೆಂಗಳೂರು: ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಕರೆತರುವುದಕ್ಕಾಗಿ ವಿಶೇಷ ತನಿಖಾ ದಳ (ಎಸ್‌ಐಟಿ)ವು ವಿದೇಶಕ್ಕೆ ತೆರಳುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

Advertisement

ಪ್ರಜ್ವಲ್‌ ಅವರಿಗಾಗಿ ಶೋಧ ಮುಂದುವರಿದಿದ್ದು, ಅವರು ಯಾವ ದೇಶದಲ್ಲಿದ್ದಾರೆ ಎಂಬ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ ಕೆಲವು ದಿನಗಳ ಕಾಲ ಕಾದು ನೋಡುವ ತಂತ್ರ ಅನುಸರಿಸಲಿದೆ. ಶೀಘ್ರದಲ್ಲಿ ಅವರು ಮರಳದಿದ್ದರೆ ಅವರಿರುವ ದೇಶಕ್ಕೆ ತೆರಳಿ ಅವರನ್ನು ಕರೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ. 8 ಜನರ ಎಸ್‌ಐಟಿ ತಂಡವು ತೆರಳಿ ಕರೆತರುವ ಸಾಧ್ಯತೆಗಳಿವೆ.

ಪ್ರಜ್ವಲ್‌ ದುಬಾೖಯಲ್ಲಿ ಇದ್ದಾರೆ ಎನ್ನಲಾಗುತ್ತಿದ್ದು, ಎಸ್‌ಐಟಿ ಅಧಿಕಾರಿಗಳು ಏರ್‌ಪೋರ್ಟ್‌, ಬಂದರು, ಗಡಿ ಪ್ರದೇಶಗಳಲ್ಲಿ ನಿಗಾ ಇರಿಸಿದ್ದಾರೆ. ಪ್ರಜ್ವಲ್‌ ವಿರುದ್ಧ ಹೊರಡಿಸಿರುವ ಬ್ಲೂ ಕಾರ್ನರ್‌ ನೊಟೀಸನ್ನು 196 ಸದಸ್ಯ ರಾಷ್ಟ್ರಗಳಿಗೆ ಕಳುಹಿಸಿರುವ ಬಗ್ಗೆ ಇಂಟರ್‌ ಪೋಲ್‌ ಎಸ್‌ಐಟಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next