Advertisement

ನಾಲ್ವರು ವಿಚಾರವಾದಿಗಳ ಭದ್ರತೆಗೆ ಎಸ್‌ಐಟಿ ಸಲಹೆ

06:00 AM Jun 20, 2018 | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ವಿಚಾರಣೆ
ಸಂದರ್ಭದಲ್ಲಿ ರಾಜ್ಯದ 4 ಮಂದಿ ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸಿದ ವಿಚಾರ ಬಹಿರಂಗಗೊಂಡಿದ್ದು, ಈ ಹಿನ್ನೆಲೆಯಲ್ಲಿ ವಿಚಾರವಾದಿಗಳಿಗೆ ಶಸ್ತ್ರ ಸಜ್ಜಿತ ಸಿಬ್ಬಂದಿಯನ್ನೊಳಗೊಂಡ ಭದ್ರತೆ ನೀಡುವ ಸಲಹೆಯೊಂದಿಗೆ ಎಸ್‌ಐಟಿ ಸರ್ಕಾರಕ್ಕೆ ಪತ್ರ ಬರೆದಿದೆ.

Advertisement

ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರದ ಅಮೋಲ್‌ ಕಾಳೆ, ಅಮಿತ್‌ ದೇಗ್ವೇಕರ್‌, ವಿಜಯಪುರದ ಮನೋಹರ್‌ ಯವಡೆ ಮತ್ತು ಶಿಕಾರಿಪುರದ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ ವಿಚಾರಣೆ ಸಂದರ್ಭದಲ್ಲಿ, ಗಿರೀಶ್‌ ಕಾರ್ನಾಡ್‌, ಕೆ.ಎಸ್‌.ಭಗವಾನ್‌, ನರೇಂದ್ರ ನಾಯಕ್‌ ಹಾಗೂ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರನ್ನು ಹತ್ಯೆ ಮಾಡಲು ಸಂಚು
ರೂಪಿಸಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ನಾಲ್ವರಿಗೂ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ಒದಗಿಸುವಂತೆ ಎಸ್‌ಐಟಿ
ಸರ್ಕಾರವನ್ನು ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಮಹಾರಾಷ್ಟ್ರದ ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್‌, ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ  ಮಹಾರಾಷ್ಟ್ರದ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದು, ಬಂಧಿತರ ವಿಚಾರಣೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next