ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಸೀಲ್ ಡೌನ್‌ನಿಂದ ಮುಕ್ತವಾಯಿತು.
Advertisement
ಈ ಮೊದಲು ಗ್ರಾಮದ ಯುವತಿಯೊಬ್ಬಳಿಗೆ ಕೋವಿಡ್ ಸೋಂಕು ತಗುಲಿತ್ತು. ಮೇ 12ರಂದು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿತ್ತು. ನಂತರ ಗೋಸ್‌ಬಾಳ್ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿತ್ತು. ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಅಲ್ಲದೆ ಎಲ್ಲರ ವರದಿ ನೆಗೆಟಿವ್ ಬಂದಿದ್ದು, 28 ದಿನಗಳ ನಂತರ ಯಾರಿಗೂ ಸೋಂಕು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಗೋಸ್‌ಬಾಳು ಗ್ರಾಮಕ್ಕೆ ವಿಧಿಸಿದ್ದ ದಿಗ್ಬಂಧನ ತೆರವುಗೊಳಿಸಲಾಯಿತು. ಪೊಲೀಸ್, ಕಂದಾಯ, ಆರೋಗ್ಯ ಮತ್ತು ಗ್ರಾಪಂ ಸಿಬ್ಬಂದಿ ಸೂಕ್ತ ನಿಗಾ ವಹಿಸಿದ್ದರು.