Advertisement

ಕ್ವಾರಂಟೈನ್‌ನಿಂದ 470 ಜನರ ಬಿಡುಗಡೆ

05:21 PM May 22, 2020 | Naveen |

ಸಿರುಗುಪ್ಪ: ನಗರದ ಬಿ.ಸಿ.ಎಂ. ಇಲಾಖೆ ವಸತಿ ನಿಲಯದಲ್ಲಿ ಕಳೆದ 14 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ಅಂತರ್‌ರಾಜ್ಯಗಳಿಂದ ಬಂದಂತಹ ವಲಸೆ ಕಾರ್ಮಿಕರಿಗೆ ತಹಶೀಲ್ದಾರ್‌ ಎಸ್‌.ಬಿ.ಕೂಡಲಗಿ ಬಿಡುಗಡೆ ಪ್ರಮಾಣ ಪತ್ರವನ್ನು ವಿತರಿಸಿ ಅವರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಟ್ಟರು.

Advertisement

ನಂತರ ಮಾತನಾಡಿದ ತಹಶೀಲ್ದಾರ್‌ ರು ಇಲ್ಲಿಂದ ತಮ್ಮ ಗ್ರಾಮಗಳಿಗೆ ತೆರಳಿದ ನಂತರ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹಾಗೂ ಹೊರಗಡೆ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್‌ ಬಳಸಿ ಕೈಗಳನ್ನು ಸ್ವಚ್ಛಗೊಳಿಸಿಕೊಂಡರೆ ಕೋವಿಡ್ ಸೊಂಕು ಬರದಂತೆ ತಡೆಯಬಹುದಾಗಿದೆ. ತಾಲೂಕಿನ ರಾರಾವಿ, ರಾವಿಹಾಳು, ಬಂಡ್ರಾಳು, ಚಿಕ್ಕಬಳ್ಳಾರಿ, ಕೆ.ಬೆಳಗಲ್ಲು, ದೇಶನೂರು ಸೇರಿದಂತೆ ವಿವಿಧ ಗ್ರಾಮಗಳಿಂದ ತೆಲಂಗಾಣ ಮತ್ತು ಸೀಮಾಂದ್ರ ಪ್ರದೇಶಗಳಾದ ಗುಂಟೂರು, ಪ್ರಕಾಶಂ, ಕರ್ನೂಲ್‌ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮೆಣಸಿನಕಾಯಿ ಕೊಯ್ಲು ಮಾಡಲು ವಲಸೆ ಹೋಗಿದ್ದ ಕಾರ್ಮಿಕರು ಕೋವಿಡ್ ಹರಡುವ ಭೀತಿಯಿಂದಾಗಿ ತಾಲೂಕಿನ ತಮ್ಮ ಗ್ರಾಮಗಳಿಗೆ ಆಗಮಿಸಿದ 1043 ಜನರನ್ನು ತಾಲೂಕು ಆಡಳಿತ ವತಿಯಿಂದ ನಗರದ 5 ವಸತಿ ನಿಲಯಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸಿ ಆರೋಗ್ಯ ಇಲಾಖೆ ವತಿಯಿಂದ ಅವರ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದೆ.

ಕೋವಿಡ್ ನೆಗೆಟಿವ್‌ ಕಂಡುಬಂದಂಥ 470 ಜನರ ಕ್ವಾರಂಟೈನ್‌ ಅವಧಿ ಮುಗಿದಿದ್ದರಿಂದ ಅವರನ್ನು ಬೀಳ್ಕೊಡಲಾಯಿತು. ಫೀವರ್‌ ಕ್ಲಿನಿಕ್‌ನ ಡಾ| ಕೊಟ್ರೇಶ್‌ ಕ್ವಾರಂಟೈನ್‌ ಗೆ ಒಳಪಟ್ಟವರಿಗೆ ಕೋವಿಡ್ ಕುರಿತು ಮುನ್ನೆಚ್ಚರಿಕೆ ಸಲಹೆ ಮತ್ತು ಮಾಹಿತಿಗಳನ್ನು ನೀಡಿದರು. ಡಾ| ಶಶಿಕುಮಾರ್‌, ಡಾ| ಟಿ. ಮಲ್ಲಿಕಾರ್ಜುನರೆಡ್ಡಿ, ಡಾ| ಚನ್ನವೀರ, ಡಾ| ಶ್ರವಣ್‌, ತಾಲೂಕು ನೋಡಲ್‌ ಅಧಿಕಾರಿ ಶ್ಯಾಮಪ್ಪ, ಗ್ರೇಡ್‌-2 ತಹಶೀಲ್ದಾರ್‌ ವಿಶ್ವನಾಥ, ಹಿರಿಯ ಆರೋಗ್ಯ ಸಹಾಯಕ ಗಿರೀಶ್‌ಕುಮಾರ್‌, ಕಂದಾಯ ನಿರೀಕ್ಷಕ ಮಹಮ್ಮದ್‌ ಸಾ ಕ್‌ಬಾಷ, ಗ್ರಾಮಲೆಕ್ಕಾಧಿಕಾರಿಗಳಾದ ವಿರುಪಾಕ್ಷಪ್ಪ, ಪರಮೇಶ್ವರ, ರಾಮಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next