ಶಿರಸಿ : ತಾಲೂಕಿನ ಹುಲೇಕಲ್ ಪಂಚಾಯತ್ ವ್ಯಾಪ್ತಿಯ ಅಮಚಿಮನೆ ಗ್ರಾಮದ ಭವಾನಿ ಹೆಗಡೆ ಮತ್ತು ಎಮ್.ವಿ.ಹೆಗಡೆಯವರಿಗೆ ಸೇರಿದ 2 ಎಕರೆ ಮಾಲ್ಕಿ ಬೆಟ್ಟ ಮತ್ತು ಅರ್ಧ ಎಕರೆ ಅಡಿಕೆ ತೋಟಕ್ಕೆ ಬುಧವಾರ ಮಧ್ಯಾಹ್ನ ತಗುಲಿದ ಆಕಸ್ಮಿಕ ಬೆಂಕಿಯಿಂದ ತೋಟದಲ್ಲಿದ್ದ ಮರಗಿಡಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಘಟನೆಯಿಂದಾಗಿ ಕೊಟ್ಯಾಂತರ ರೂ. ಹಾನಿ ಉಂಟಾಗಿದ್ದು, ರೈತ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಹೊಗೆ ಕಾಣಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಕುಟುಂಬದ ಸದಸ್ಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ಉರಿಯುವ ಬೆಂಕಿಯು ನೋಡ ನೋಡುತ್ತಿದ್ದಂತೆ ಫಸಲು ನೀಡುತ್ತಿದ್ದ ತೋಟಕ್ಕೆ ಹರಡಿ, ತೋಟವನ್ನು ಸುಟ್ಟು ಹಾಕಿದೆ.
ಬೆಂಕಿ ಅವಘಡದಿಂದ ಕುಟುಂಬದವರು, ಸ್ಥಳೀಯರು ಅಸಹಾಯಕರಾಗಿ ನಿಲ್ಲುವಂತಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು, ಎಂದು ಆಗ್ರಹಿಸಿದ್ದಾರೆ.