Advertisement

Sirsi: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 5.28 ಲಕ್ಷ ರೂ.ವಶಕ್ಕೆ

10:19 PM Mar 26, 2024 | Team Udayavani |

ಕಾರವಾರ: ಬಸ್ ನಲ್ಲಿ ಸಾಗಾಟ ಮಾಡುತ್ತಿದ್ದ ಯಾವುದೇ ದಾಖಲೆ ಇರದ 5.28 ಲಕ್ಷ ರೂ ಹಣವನ್ನು ಶಿರಸಿ ತಾಲೂಕಿನ ತಿಗಣಿ ಚೆಕ್ ಪೋಸ್ಟನಲ್ಲಿ ಮಂಗಳವಾರ ವಶಕ್ಕೆ ಪಡೆಯಾಗಿದೆ.

Advertisement

ಶಿರಸಿ ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿ ಪಿಆರ್ ಇಡಿ ಸಹಾಯಕ ಅಭಿಯಂತರ ರಂಗಪ್ಪ ನೇತೃತ್ವದ ತಂಡ ಹಣವನ್ನು ವಶಕ್ಕೆ ಪಡೆದಿದೆ. ಬೆಳಗಾವಿ ಅಥಣಿಯ ಸಂಕೋನಾ ನಿವಾಸಿ ಪರಶುರಾಮ ಯಲ್ಲಪ್ಪ ಎಂಬವರಿಂದ 5.28 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.

ವಾಹನವು ಶಿರಸಿಯಿಂದ ಹಿರೆಕೇರೂರಗೆ ಹೋಗುವ ಸಮಯದಲ್ಲಿ ವಾಹನವನ್ನು ಕರ್ತವ್ಯ ನಿರತ ಎಸ್.ಎಸ್.ಎ ತಂಡದವರು ಮತ್ತು ಪೊಲೀಸ್ ಸಿಬ್ಬಂದಿಗಳು ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳಿಲ್ಲದ ನಗದು ದೊರಕಿತು. ಅಧಿಕೃತ ದಾಖಲೆಗಳು ವಾಹನ ಪರಿಶೀಲನೆ ಮಾಡುವಾಗ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ಶಿರಸಿಯ ಉಪ ಖಜಾನೆಯಲ್ಲಿ ಇರಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ದಾಖಲೆಯಿಲ್ಲದೆ ಕಾರ್ ನಲ್ಲಿ ಸಾಗಿಸಲಾಗುತ್ತಿದ್ದ 1.50 ಲಕ್ಷ ರೂ.ಗಳನ್ನು ತಿಗಣಿ ಚೆಕ್ ಪೋಸ್ಟ್ ನಲ್ಲಿ ಮಂಗಳವಾರ  ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಯಲ್ಲಾಪುರ ವಿಭಾಗದ ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next