Advertisement

ಕಥಾ ಮೇನಿಯಾದಲ್ಲಿ ಕಥಾ ರತ್ನವಾದ ಸಾನ್ವಿ ಜೋಶಿ

08:18 PM Oct 08, 2021 | Team Udayavani |

ಶಿರಸಿ: ರಾಜ್ಯ, ಹೊರ ರಾಜ್ಯ, ಹೊರ ದೇಶಗಳಿಂದ ಆರನೂರಕ್ಕೂ ಅಧಿಕ ಕನ್ನಡದ ಮಕ್ಕಳು ಪಾಲ್ಗೊಂಡ ಕಥಾ ಮೇನಿಯಾ ಸ್ಪರ್ಧೆಯಲ್ಲಿ ತಾಲೂಕಿನ ತಾರಗೋಡ ಬಳಿಯ‌ ಕೂಗಲಕುಳಿಯ ಸಾನ್ವಿ ಜೋಶಿ ಕಥಾ ರತ್ನರಾಗಿ ಆಯ್ಕೆ ಆಗಿದ್ದಾರೆ.

Advertisement

ಅಂತಿಮ ಸುತ್ತಿನಲ್ಲಿ ಈ ಸ್ಪರ್ಧೆಯಲ್ಲಿ ಕಥೆ ಹೇಳಿ ಹನ್ನೊಂದು ಮಕ್ಕಳು ಕಥಾರತ್ನರಾಗಿ ಹೊರ ಹೊಮ್ಮಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಲ್ಲಿ ಕಥೆ ಹೇಳುವ ಪ್ರವೃತ್ತಿ ಉಳಿಸಬೇಕು ಎಂದು ಮೈಸೂರಿನ ಸೆಂಟರ್ ಫಾರ್ ಕಲ್ಚರ್ ಕಮ್ಯುನಿಕೇಶನ್ ಎಂಡ್ ಕ್ರಿಯೇಟಿವಿಟಿ ಫೋರ್  ಸಿ, ನಟನ ರಂಗ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡ ಸ್ಪರ್ಧೆ ಇದಾಗಿತ್ತು. ಡಾ. ನಿರಂಜನ ವಾನಳ್ಳಿ, ಮಂಡ್ಯ ರಮೇಶ ವೀಕ್ಷಿಸಿ ಅಂತಿಮ ಹಂತದ ಮೂವತ್ತು ಕಥೆಗಳನ್ನು ಪ್ರಸಿದ್ದ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ಕಳುಹಿಸಿ ಅಂತಿಮ ಆಯ್ಕೆ ಮಾಡಲಾಗಿತ್ತು. ಸಾನ್ವಿ ಜೋಶಿ ಹನ್ನೊಂದು ಮಕ್ಕಳಲ್ಲಿ ಸ್ಥಾನ ಪಡೆದಿದ್ದು, ಎಲ್ಲರೂ ಪ್ರಥಮ ಸ್ಥಾನ ಪಡೆದಂತೇ ಆಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಇದನ್ನೂ ಓದಿ:ಮೀನು ಹಿಡಿಯಲು ಹೋಗಿ ನೀರುಪಾಲು: ದಿನಕಳೆದರೂ ಸಿಗದ ಬಾಲಕನ ಕುರುಹು

ಸಾನ್ವಿ ಜೋಶಿ ಪ್ರಭಾತ ಜೋಶಿ ಹಾಗೂ ನಂದನ ಜೋಶಿ ಮಗಳು. ಟಿಎಸ್ಎಸ್‌ ನಡೆಸಿದ‌ ಕಿಶೋರ ಕನ್ನಡತಿಯಲ್ಲೂ ಪಾಲ್ಗೊಂಡು ಗೆದ್ದಿದ್ದಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next